News Kannada
Friday, October 07 2022

ಮನರಂಜನೆ

ದೆಹಲಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ: ಮುಂಬೈನ ನಟ, ಮಾಡೆಲ್ ಅಭಿಷೇಕ್ ನರುಲಾ ಸಾವು - 1 min read

Photo Credit :

ದೆಹಲಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ: ಮುಂಬೈನ ನಟ, ಮಾಡೆಲ್ ಅಭಿಷೇಕ್ ನರುಲಾ ಸಾವು

ನವದೆಹಲಿ: ಶನಿವಾರ ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಮುಂಬೈನ 26 ವರ್ಷದ ಮಾಡೆಲ್ ಹಾಗೂ ನಟ ಅಭಿಷೇಕ್ ನರುಲಾ ಮೃತಪಟ್ಟಿದ್ದು ಈತನ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಇವರು ಭರತ್ ನಗರದಿಂದ ಅಶೋಕ್ ವಿಹಾರ್ ಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸತ್ಯವತಿ ಕಾಲೇಜ್ ಫ್ಲೈ ಓವರ್ ಸಮೀಪದ ಟ್ರಾಫಿಕ್ ಸಿಗ್ನಲ್ನಲ್ಲಿ ಅಭಿಷೇಕ್ ತನ್ನ ಕಾರನ್ನು ನಿಲ್ಲಿಸಿದಾಗ ವೇಗದಿಂದ ಬಂದ ಹೊಂಡಾ ಸಿಟಿ ಕಾರು ನಿಲ್ಲಿಸಿದ್ದ ಕಾರಿನ ಮೇಲೆ ಎರಗಿದೆ. ಇದರಿಂದ ಕಾರಿನಲ್ಲಿದ್ದ ಅಭಿಷೇಕ್ ಈತನ ಇಬ್ಬರು ಸ್ನೇಹಿತರಾದ ರಂದೀಪ್ ಹಾಗೂ ಯೋಗೇಶ್ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ನಟ ಅಭಿಷೇಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ರಂದೀಪ್ ಹಾಗೂ ಯೋಗೇಶ್ ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸವೆ. .

See also  ಕನ್ನಡದ ಹಿರಿಯ ನಟ ಸುದರ್ಶನ್ ವಿಧಿವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು