News Kannada
Tuesday, October 04 2022

ಮನರಂಜನೆ

ಧರ್ಮ ಸಂಸತ್ ನಲ್ಲಿ ಪದ್ಮಾವತಿ ಚಿತ್ರ ನಿಷೇಧಕ್ಕೆ ಆಗ್ರಹ - 1 min read

Photo Credit :

ಧರ್ಮ ಸಂಸತ್ ನಲ್ಲಿ ಪದ್ಮಾವತಿ ಚಿತ್ರ ನಿಷೇಧಕ್ಕೆ ಆಗ್ರಹ

ಉಡುಪಿ: ಪದ್ಮಾವತಿ ಚಿತ್ರದಲ್ಲಿ ಪದ್ಮಾವತಿ ದೇವಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದ್ದು, ದೇಶಾದಾದ್ಯಂತ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರುವಂತೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ಕ್ರಮ ಜರುಗಿಸಬೇಕು ಎಂದು ವಿಎಚ್ ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಒತ್ತಾಯಿಸಿದರು.

ಹಿಂದೂ ಧರ್ಮವನ್ನು ಅವಮಾನಕ್ಕೆ ಒಳಪಡಿಸುವ ಹಾಗೇ ಪದ್ಮಾವತಿ ಚಲನಚಿತ್ರವನ್ನು ನಿರ್ಮಿಸಲಾಗಿದೆ ಎಂದು ಧರ್ಮ ಸಂಸತ್ನ ಸಮಾರೋಪದ ಪ್ರಯುಕ್ತ ನಡೆದ ಹಿಂದೂ ಸಮಾಜೋತ್ಸವದಲ್ಲಿ ಆರೋಪಿಸಿದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮುಖಂಡರು, ಚಿತ್ರವನ್ನು ನಿಷೇಧಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.
ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳನ್ನು ಅವಮಾನಿಸುವುದು ಕೆಲವರಿಗೆ ಶೋಕಿ ಅನಿಸುತ್ತಿದೆ.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ವಿಎಚ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ‘ಪದ್ಮಾವತಿ ಚಿತ್ರ ನಿರ್ಮಿಸಿದವರು, ಚಿತ್ರಕತೆ ರಚಿಸಿದವರು, ಸಂಗೀತ ನಿರ್ದೇಶನ ಮಾಡಿದವರು, ನಟಿಸಿದವರು ಎಲ್ಲರೂ ಅಪರಾಧಿಗಳೇ. ಅವರೆಲ್ಲರೂ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ವಿತರಕರು ಮತ್ತು ಚಿತ್ರಮಂದಿರಗಳ ಮಾಲೀಕರು ಪದ್ಮಾವತಿ ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸಬೇಕು’ ಎಂದರು.

 

See also  ನಟನೆಯಿಂದ ದೂರು ಉಳಿದಿರುವುದರ ಕುರಿತು ಸ್ಪಷ್ಟನೆ ನೀಡಿದ ಹರ್ಭಜನ್ ಪತ್ನಿ ನಟಿ ಗೀತಾ ಬಸ್ರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು