News Kannada
Thursday, October 06 2022

ಮನರಂಜನೆ

ಮಫ್ತಿ ಮತ್ತು ಗೌಡ್ರು ಹೋಟೆಲ್ ಚಿತ್ರ ತೆರೆಗೆ ಬರಲು ಸಿದ್ಧ - 1 min read

Photo Credit :

ಮಫ್ತಿ ಮತ್ತು ಗೌಡ್ರು ಹೋಟೆಲ್ ಚಿತ್ರ ತೆರೆಗೆ ಬರಲು ಸಿದ್ಧ

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ `ಮಫ್ತಿ’ ಚಿತ್ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನರ್ತನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಸಾಯಿಸರ್ವೇಶ್, ಕೆ.ಕಲ್ಯಾಣ್ ಹಾಗೂ ನರ್ತನ್ ರಚಿಸಿದ್ದಾರೆ. ಕೆ.ಶ್ರೀರಾಂಲಕ್ಷ್ಮಣ್ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುವುದರೊಂದಿಗೆ ಸಹಕಾರ ನಿರ್ದೇಶನವನ್ನು ಮಾಡಿದ್ದಾರೆ.

ಶಿವರಾಜಕುಮಾರ್, ಶ್ರೀಮುರಳಿ, ಸಾನ್ವಿ ಶ್ರೀವಾಸ್ತವ್, ದೇವರಾಜ್, ಛಾಯಾಸಿಂಗ್, ಪ್ರಕಾಶ್ ಬೆಳವಾಡಿ, ವಸಿಷ್ಠಸಿಂಹ, ಸಾಧುಕೋಕಿಲ, ಚಿಕ್ಕಣ್ಣ, ಮಧುಗುರುಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗೌಡ್ರು ಹೋಟೆಲ್: ಒಂದು ಸುಂದರ ಭಾವನಾತ್ಮಕ ಕಥೆಯಲ್ಲಿ ತಾತ, ಮೊಮ್ಮಗನ ಬಾಂಧವ್ಯವನ್ನು ಹೇಳಲು ಹೊರಟಿರುವ `ಗೌಡ್ರು ಹೊಟೇಲ್’ ಚಿತ್ರವೂ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಮಿನೆಂಟ್ ಮೂವೀ ಮೇಕರ್ಸ್ ಸಂಸ್ಥೆ ಮೂಲಕ ಸತೀಶ್ ರೆಡ್ಡಿ, ಇವರೊಂದಿಗೆ ರಮೇಶ್ ಶಿವ, ಸತ್ಯನ್.ಎಸ್.ಪಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

`ವಿಷ್ಣುವರ್ಧನ, `ಜೈಲಲಿತಾ ಚಿತ್ರಗಳ ನಿರ್ದೇಶನ ಮಾಡಿದ್ದ, ಪಿ.ಕುಮಾರ್ ಈ ಚಿತ್ರದ ನಿರ್ದೇಶಕರು. ಅಪಾರ ವೆಚ್ಚದಲ್ಲಿ, ಅದ್ದೂರಿ ತಾರಾಗಣದ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ವಿಜಾಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಯುಕೆನಲ್ಲ್ಲಿ ಇಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಇವರಿಗೆ ಜತೆಯಾಗಿ `ಶಿವಲಿಂಗ` ಚಿತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ವೇದಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಾತನ ಪಾತ್ರದಲ್ಲಿ ಪ್ರಕಾಶ್ ರೈ ಅಭಿನಯಿಸಿದ್ದಾರೆ. ಅನಂತನಾಗ್, ಸಿಹಿಕಹಿ ಚಂದ್ರು, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ದೀಪಕ್ ಶೆಟ್ಟಿ, ಕಡ್ಡಿಪುಡಿ ಚಂದ್ರು, ಎಂ.ಎನ್.ಲಕ್ಷ್ಮೀದೇವಿ, ಎಂ.ಎನ್.ಸುರೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕೆ.ಕಲ್ಯಾಣ್, ಕವಿರಾಜ್ ಸಾಹಿತ್ಯದ ಐದು ಗೀತೆಗಳಿಗೆ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಸಂಗೀತ ಸಂಯೋಜಿಸುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಜೊತೆಯಲ್ಲಿ ತೆಲುಗು ಸ್ಟಾರ್ ಛಾಯಾಗ್ರಾಹಕ ಶಿವ ಕೂಡ ತಂಡದಲ್ಲಿದ್ದು, ಜೋನಿ ಹರ್ಷ ಸಂಕಲನ, ಮಾಸ್ಟರ್ ಶ್ರೀಧರ್ ನೃತ್ಯ ನಿರ್ದೇಶನ ಹಾಗೂ ರವಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಎರಡು ಚಿತ್ರಗಳ ಬಗ್ಗೆಯೂ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆಯಿದ್ದು, ಸಿನಿಮಾ ನೋಡಿದ ಬಳಿಕವಷ್ಠೆ ಇದರ ಬಗ್ಗೆ ಗೊತ್ತಾಗಲಿದೆ

See also  ರಹಸ್ಯ ಮದುವೆ ಕುರಿತು ನಟಿ ಶ್ರುತಿ ಹರಿಹರನ್ ಸ್ಪಷ್ಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು