News Kannada
Monday, September 26 2022

ಮನರಂಜನೆ

ಕೊಡಗಿನ ಪ್ರಾರ್ಥನಾ ಈಗ ಮಿಸ್ ದಿವಾ.. - 1 min read

Photo Credit :

ಕೊಡಗಿನ ಪ್ರಾರ್ಥನಾ ಈಗ ಮಿಸ್ ದಿವಾ..

ಮಡಿಕೇರಿ: ಕೊಡಗಿನ ಯುವತಿಯರು ಈಗ ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಮಾಡಲಿಂಗ್ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಹಲವು ಸಂಸ್ಥೆಗಳು ವಿವಿಧ ರೀತಿಯ ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ಅದರಲ್ಲಿ ಗೆಲುವು ಸಾಧಿಸಬೇಕೆಂಬ ಬಯಕೆಗಳು ಹೆಚ್ಚಿನವರದ್ದಾಗಿದೆ.

ಮಾಡಲಿಂಗ್ ಕ್ಷೇತ್ರದತ್ತ ಆಕರ್ಷಿತರಾಗಿದ್ದ ಕೊಡಗಿನ ಬೆಡಗಿ 22ರ ಹರೆಯದ ಪರದಂಡ ಪ್ರಾರ್ಥನಾ ಸುಬ್ರಮಣಿ ಇದೀಗ ಮಿಸ್ ದಿವಾ ಆಫ್ ಇಂಡಿಯಾ – 2017 ಸೌಂದರ್ಯ ಸ್ಪರ್ಧೆಯ ಸೀಜನ್ -2ರಲ್ಲಿ ವಿಜೇತಳಾಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಮಡಿಕೇರಿಯ ಗ್ರೀನ್ ಸಿಟಿ ಫೋರಂ ವತಿಯಿಂದ ಕಳೆದ ವರ್ಷ ಮಡಿಕೇರಿ ಸೇರಿದಂತೆ ವಿವಿಧೆಡೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಆಂದೋಲನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಜಿಲ್ಲೆಯ ಮಂದಿಗೆ ಚಿರಪರಿಚಿತರಾಗಿದ್ದ ಪ್ರಾರ್ಥನಾ ಶಾಲಾ ದಿನಗಳಲ್ಲಿ ಕ್ರೀಡೆಯತ್ತ ಆಸಕ್ತಿ ಹೊಂದಿದ್ದರು. ಆಥ್ಲೆಟಿಕ್ನಲ್ಲಿ ಉತ್ತಮ ಸಾಧನೆ ಮಾಡಿದ್ದ ಇವರು ನಂತರ ಅದ್ಯಾಕೋ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯುವ ಮನಸ್ಸು ಮಾಡಲಿಲ್ಲ.

ಉದ್ಯೋಗದತ್ತ ಮುಖ ಮಾಡಿದ ಅವರು ಸೈಸ್ ಜೆಟ್ ನಲ್ಲಿ ಗಗನಸಖಿಯಾಗಿ ಕೆಲಸ ಆರಂಭಿಸಿದರು. ಹೀಗಿರುವಾಗಲೇ ಅವರನ್ನು ಮಾಡಲಿಂಗ್ ಕ್ಷೇತ್ರ ಕೈ ಬೀಸಿ ಕರೆಯತೊಡಗಿತು. ಹೀಗಾಗಿ ಅದರತ್ತ ಆಕರ್ಷಿತರಾದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಏಕೈಕ ಸ್ಪರ್ಧಿಯಾಗಿದ್ದ ಪ್ರಾರ್ಥನಾ ಮಿಸ್ ದಿವಾ ಆಫ್ ಇಂಡಿಯಾ ಸೀಜನ್ -2, 2017ರಲ್ಲಿ ವಿಜೇತಳಾಗಿ ಹೊರಹೊಮ್ಮಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್ ದಿವಾ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯಿಂದ 14 ಸ್ಪರ್ಧಾಳುಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಕರ್ನಾಟಕದಿಂದ ಪ್ರಾರ್ಥನಾ ಸೇರಿದಂತೆ ದೆಹಲಿ ಹಾಗೂ ಚಂಡೀಗಡದ ಇಬ್ಬರು ಆಯ್ಕೆಯಾಗಿದ್ದರು. ಆ ನಂತರ ನಡೆದ ಸೌಂದರ್ಯ ಸ್ಪರ್ಧೆಯ ವಿವಿಧ ಹಂತಗಳಲ್ಲಿ ಮುನ್ನಡೆಯುವ ಮೂಲಕ ಪರದಂಡ ಪ್ರಾರ್ಥನಾ ಸುಬ್ರಮಣಿ ಪ್ರಥಮ ಸ್ಥಾನದೊಂದಿಗೆ ಮಿಸ್ ದಿವಾ ಆಫ್ ಇಂಡಿಯಾ- 2017 ಆಗಿ ಹೊರಹೊಮ್ಮಿದರು. ಇವರು ಕಳೆದ ಎರಡೂವರೆ ವರ್ಷದಿಂದ ಮಾಡಲಿಂಗ್ ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆಯೊಂದಿಗೆ ಗುರಿ ತಲುಪಿದ್ದಾರೆ. ಇವರು ಕೊಡಗಿನ ಪರದಂಡ ಮುದ್ದು ಸುಬ್ರಮಣಿ ಹಾಗೂ ಭವಾನಿ ದಂಪತಿಯ ಪುತ್ರಿಯಾಗಿದ್ದಾರೆ.

See also  ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ ಕಾದಂಬರಿ ಆಧರಿತ 'ದನಗಳು' ಚಿತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು