ಮೈಸೂರು: ಕಲೆಯನ್ನು ಶ್ರದ್ಧೆಯಿಂದ ಕಲಿತು ಅದನ್ನು ಅನಾವರಣ ಮಾಡಿದಾಗ ವೀಕ್ಷಿಸುವ ಕಲಾರಸಿಕರಿಂದ ಬರುವ ಪ್ರತಿಕ್ರಿಯೆ ಆತ್ಮತೃಪ್ತಿ ನೀಡುತ್ತದೆ. ಇದಕ್ಕೆ ಸಾಕ್ಷಿಯಾದದ್ದು ನಗರದ ಪ್ರೀಮಿಯರ್ ಸ್ಟುಡಿಯೋ ಸಭಾಂಗಣದ ವೇದಿಕೆಯಲ್ಲಿ ನಡೆದ ಆರ್ಟಿಕ್ಯುಲೇಟ್ ನೃತ್ಯೋತ್ಸವ.
ಈ ನೃತ್ಯೋತ್ಸವದಲ್ಲಿ ನೃತ್ಯಾಯನ ಓಡಿಸ್ಸಿ ನೃತ್ಯ ಅಕಾಡೆಮಿಯ ಸ್ಮರಣಿಕ ಜೇನಾ, ದೇಬಶ್ರೀ ಪಾಂಡ ಹಾಗೂ ಅಂಕಿತಾ ಅರ್ಪಿತಾ ಮೊಹಾಂತಿಯವರು ಒಳಗೊಂಡಂತೆ ಮೂರು ಮಂದಿ ಕಲಾವಿದರು ಆಧ್ಯಾತ್ಮಿಕ ಉತ್ಸಾಹವನ್ನು ಮನಮೋಹಕವಾಗಿ ಪ್ರದರ್ಶಿಸಿ ಎಲ್ಲರ ಗಮನಸೆಳೆದರು. ಅದರಲ್ಲೂ ನಿತ್ಯ ನರಸಿಂಹನ್ ಅವರು ಭರತನಾಟ್ಯ ಎಲ್ಲರನ್ನು ತನ್ನತ್ತ ಸೆಳೆಯಿತು.
ಸಂಜನಾ ಪ್ರಸಾದ್ ಅವರು ಅಚ್ಚುಕಟ್ಟಾದ ಮತ್ತು ನುರಿತ ಹಾಗೂ ಅದ್ಭುತ ರೀತಿಯಲ್ಲಿ ಹೆಜ್ಜೆಯನ್ನು ತಾಳಕ್ಕೆ ತಕ್ಕ ರೀತಿಯಲ್ಲಿ ಹಾಕುತ್ತಾ ಎಲ್ಲರನ್ನೂ ಬೆರಗುಗೊಳಿಸಿದರು. ಸುಮಾ ರಾಜೇಶ್, ಪ್ರಿಯಾಂಕ ಭಾರ್ಗವ್, ಸಂಪದ ಜಿ., ರಚನಾ ಗುರುದತ್ ಮೊದಲಾದವರು ಭಾಗವಹಿಸಿದ್ದರು