News Kannada
Monday, December 05 2022

ಮನರಂಜನೆ

ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ: ದೂರು

Photo Credit :

ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ: ದೂರು

ಬೆಂಗಳೂರು: ಬಹುಭಾಷಾ ತಾರೆ ಹಾಗೂ ಕನ್ನಡದ ಹೆಬ್ಬುಲಿ ಚಿತ್ರದ ನಾಯಕಿ ನಟಿ ಅಮಲಾ ಪೌಲ್ ಗೆ ಮಲೇಷಿಯಾದಲ್ಲಿ ಲೈಂಗಿಕ ಕಿರುಕುಳ ನಡೆದಿದೆ. ಅಮಲಾ ಪೌಲ್ ಮಲೇಷಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಯೊಂದಕ್ಕೆ ಡ್ಯಾನ್ಸ್ ನನ್ನು ಅಭ್ಯಾಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ನಂತರ ಚೆನ್ನೈನಲ್ಲಿರುವ ಟಿ.ನಗರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದಾರೆ.

ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅಮಲಾ ಪೌಲ್, ನಾನು ಮಲೇಷಿಯಾದ ಕಾರ್ಯಕ್ರಮಯೊಂದಕ್ಕೆ ಭಾಗವಹಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಡ್ಯಾನ್ಸ್ ಅಭ್ಯಾಸಕ್ಕೆಂದು ನೃತ್ಯ ನಿರ್ದೇಶಕ ಶ್ರೀಧರನ ನೃತ್ಯ ಸ್ಟುಡಿಯೊಗೆ ಹೋಗಿದ್ದೆ.

ಅಲ್ಲಿಗೆ ಬಂದ ವ್ಯಕ್ತಿ ನಾನು ಅವರಿಗೆ ತಿಳಿದಿರುವಂತೆ ಬಂದು ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಬಳಿಕ ನಾನು ಒಬ್ಬಂಟಿಯಾಗಿ ಇದ್ದಾಗ ಅಸಭ್ಯವಾಗಿ ನನ್ನ ಬಳಿ ಮಾತನಾಡಿದ್ದಾರೆ. ನನಗೆ ತಕ್ಷಣ ಆಘಾತವಾಯಿತು. ಆದ್ದರಿಂದ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಈ ಘಟನೆ ನಡೆದಾಗ ನೃತ್ಯ ನಿರ್ದೇಶಕ ಶ್ರೀಧರ್ವ ಅವರು ಇರಲಿಲ್ಲ.

ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಆಸಕ್ತಿಯನ್ನು ವಹಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಸ್ಥ ಅಝೇಗೆಸನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

See also  ಪ್ರಪಂಚದಲ್ಲೇ ಮೊಟ್ಟ ಮೊದಲನೆಯ ಕಿರುಚಿತ್ರ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು