ಬೆಂಗಳೂರು: ಶಶಾಂಕ್ ಸಿನಿಮಾಸ್ ನಿರ್ಮಿಸುತ್ತಿರುವ, ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದ ಚಿತ್ರೀಕರಣವು ಶೇಕಡ 50ರಷ್ಟು ಮುಗಿದಿದ್ದು, ತೆರೆಗೆ ಬರಲು ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಬೆಂಗಳೂರಿನ ಸುತ್ತ ಮುತ್ತ ನಡೆದ 35 ದಿನಗಳ ಚಿತ್ರೀಕರಣದಲ್ಲಿ ನಟ ಕೃಷ್ಣ ಅಜಯ್ ರಾವ್, ಸುಮಲತಾ ಅಂಬರೀಶ್, ಅಶಿಕಾ ರಂಗನಾಥ್, ಭಜರಂಗಿ ಲೋಕಿ, ಅಚ್ಯುತಕುಮಾರ್, ಸಾಧು ಕೋಕಿಲ ಹಾಗು ಇತರರ ಅಭಿನಯದ ಅನೇಕ ಸನ್ನಿವೇಶ ಹಾಗು ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಾಹಸ ಸನ್ನೀವೇಶದ ಚಿತ್ರೀಕರಣವೊಂದರಲ್ಲಿ ನಾಯಕ ಅಜಯ್ ರಾವ್ ಅವರ ಕಾಲಿಗೆ ಪೆಟ್ಟಾಗಿದ್ದು ಸಧ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ಏಪ್ರಿಲ್ 2ನೇ ವಾರದಿಂದ ಮುಂದಿನ ಹಂತದ
ಚಿತ್ರೀಕರಣ ಶುರುವಾಗಲಿದೆ.
ಚಿತ್ರಕ್ಕೆ ಶೇಖರ್ ಚಂದ್ರ ಛಾಯಗ್ರಹಣ, ಡಾ. ಕೆ. ರವಿವರ್ಮ ಸಾಹಸ ಸಂಯೋಜನೆ, ಜೂಡಾ ಸ್ಯಾಂಡಿ ಸಂಗೀತ ಹಾಗು ಗಿರಿ ಮಹೇಶ್ ಅವರ ಸಂಕಲನವಿರುತ್ತದೆ.