News Kannada
Friday, December 02 2022

ಮನರಂಜನೆ

ಶ್ರೀ ಶಿರಡಿ ಸಾಯಿ ಸಚ್ಛರಿತ್ರೆ ಧಾರಾವಾಹಿ ಚಿತ್ರೀಕರಣ

Photo Credit :

ಶ್ರೀ ಶಿರಡಿ ಸಾಯಿ ಸಚ್ಛರಿತ್ರೆ ಧಾರಾವಾಹಿ ಚಿತ್ರೀಕರಣ

ಮಳವಳ್ಳಿ: ಬೆಂಗಳೂರಿನ ಸತ್ಶೃಂಗ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಾಯಿ ಪ್ರಕಾಶ್ ಗುರೂಜಿ ಅವರು ನಿರ್ಮಿಸುತ್ತಿರುವ ಶ್ರೀ ಶಿರಡಿ ಸಾಯಿ ಸಚ್ಛರಿತ್ರೆ ಎಂಬ ಧಾರಾವಾಹಿಯ ಚಿತ್ರೀಕರಣ ಪಟ್ಟಣದಲ್ಲಿ ಭರದಿಂದ ನಡೆಯುತ್ತಿದೆ.

ಪಟ್ಟಣದ ಗಂಗಾಮತ ಬೀದಿಯ ಅತ್ಯಂತ ಪುರಾತನವಾದ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಚಿತ್ರೀಕರಣಕ್ಕೆ ಸಾಯಿಪ್ರಕಾಶ್ ಗುರೂಜಿ ಚಾಲನೆ ನೀಡಿದ್ದಾರೆ. ಧಾರಾವಾಹಿ ಕುರಿತಂತೆ ಅವರು ಮಾತನಾಡಿ, ಶಿರಡಿ ಸಾಯಿಬಾಬರ ಜೀವನ ಚರಿತ್ರೆ ಬಗ್ಗೆ ಹಲವಾರು ಕಥೆ ಸಿನಿಮಾ ಹಾಗೂ ಧಾರಾವಾಹಿಗಳು ನಿರ್ಮಾಣವಾಗಿವೆ. ಆದರೆ ಅವರ ಜೀವನಗಾಥೆ ಬಗ್ಗೆ ಇನ್ನಷ್ಟು ಆಳವಾದ ವಸ್ತುನಿಷ್ಠ ವಿಚಾರಗಳನ್ನು ಆಧರಿಸಿ ಈ ಧಾರಾವಾಹಿಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ರಾಮಮಂದಿರದ ಸುತ್ತಮುತ್ತ ಇರುವ ಹಳೇ ಹೆಂಚಿನ ಮನೆಗಳ ಬೀದಿಯಲ್ಲಿ ಒಟ್ಟು 5 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶರತ್ ಕುಮಾರ್ ಬೆಳವಲೆ ತಿಳಿಸಿದರು.

ಮಂಡ್ಯ ರಘು ಸಾಯಿಬಾಬಾರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟರಾಜ್ ಶರ್ಮ ಮತ್ತಿತರರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

See also  ಮದುವೆಗೆ ನಿರಾಕರಿಸಿದ ನಟಿಯನ್ನು ಇರಿದ ಭಗ್ನಪ್ರೇಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು