News Kannada
Monday, December 05 2022

ಮನರಂಜನೆ

ರಾಷ್ಟ್ರ ಪ್ರಶಸ್ತಿ: ತುಳುವಿನ ಪಡ್ಡಾಯಿ ಅತ್ಯುತ್ತಮ ಪ್ರಾದೇಶಿಕ ಸಿನಿಮಾ

Photo Credit :

ರಾಷ್ಟ್ರ ಪ್ರಶಸ್ತಿ: ತುಳುವಿನ ಪಡ್ಡಾಯಿ ಅತ್ಯುತ್ತಮ ಪ್ರಾದೇಶಿಕ ಸಿನಿಮಾ

ನವದೆಹಲಿ: ತುಳು ಸಿನಿಮಾ `ಪಡ್ಡಾಯಿ’ ಮತ್ತು ಕನ್ನಡದ `ಹೆಬ್ಬೆಟ್ಟು ರಾಮಕ್ಕ’ ಚಿತ್ರವು 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಭಾಗದ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯ್ ಸಿಂಹ ನಿರ್ದೇಶನದ `ಪಡ್ಡಾಯಿ’ ಚಿತ್ರವು ಉತ್ತಮ ತುಳು ಸಿನಿಮಾ ಪ್ರಶಸ್ತಿಗೆ ಪಡೆದುಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿ ಅಕ್ಷಯ್ ಕುಮಾರ್ ಪಾಲಾದರೆ, ಇತ್ತೀಚೆಗಷ್ಟೇ ನಿಧನರಾಗಿರುವ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೆಲುಗಿನ `ಬಾಹುಬಲಿ-2’ ಚಿತ್ರವು ಜನಪ್ರಿಯ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ತಮಿಳಿನ `ಟು ಲೆಟ್’, ತೆಲುಗಿನ `ಘಾಜಿ’, ಗುಜರಾತಿಯ `ಧಾ’, ಹಿಂದಿಯ `ನ್ಯೂಟನ್’, ಮರಾಠಿಯ `ಕಚ್ಛಾಲಿಂಬೂ’, ಅಸ್ಸಾಮಿಯಾ `ಈಶೂ’, ಬಂಗಾಳಿಯ `ಮಯೂರಾಕ್ಷಿ’ ಸಿನಿಮಾಗಳು ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ವಿಭಾಗದ ಪ್ರಶಸ್ತಿ ಪಡೆದಿದೆ.

`ಲಡಾಖ್ ಚಲೇ ರಿಕ್ಷಾ ವಾಲೇ’(ಬಂಗಾಳಿ) ಅತ್ಯುತ್ತಮ ಸಾಹಸಮಯ ಸಿನಿಮಾ, ಅತ್ಯುತ್ತಮ ತನಿಖಾ ಸಿನಿಮಾವಾಗಿ ‘1984 when the sun diid not rise’, ಅತ್ಯುತ್ತಮ ಅನಿಮೇಶನ್ ಚಿತ್ರವಾಗಿ `ಫಿಶ್ ಕರಿ’, ಅತ್ಯುತ್ತಮ ಕಿರುಚಿತ್ರ `ಮಯತ್’, ಕೌಟುಂಬಿಕ ಮೌಲ್ಯಗಳ ಅತ್ಯುತ್ತಮ ಚಿತ್ರವಾಗಿ `ಹ್ಯಾಪಿ ಬರ್ತ್ ಡೇ’, ಉತ್ತಮ ಸಿನಿಮಾಟೋಗ್ರಫಿ ಸಿನಿಮಾವಾಗಿ `ಐ ಟೆಸ್ಟ್’ ಆಯ್ಕೆಯಾಗಿದೆ.

‘ಮಾರ್ಚ್ 22’ ಗೆ ಉತ್ತಮ ಸಾಹಿತ್ಯ ಪ್ರಶಸ್ತಿ
ಅನಿವಾಸಿ ಭಾರತೀಯ ಉದ್ಯಮಿ ಹರೀಶ್ ಶೇರಿಗಾರ್ ಅವರು ನಿರ್ಮಿಸಿರುವ `ಮಾರ್ಚ್ 22′ ಚಿತ್ರವು ಉತ್ತಮ ಸಾಹಿತ್ಯ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ಎಸಿಎಂಇ ಮೂವೀಸ್ ಇಂಟರ್ ನ್ಯಾಶನಲ್ ಬ್ಯಾನರ್ ನಡಿಯಲ್ಲಿ `ಮಾರ್ಚ್ 22′ ಚಿತ್ರ ನಿರ್ಮಿಸಿದ್ದರು. ಆಗಸ್ಟ್ 25, 2017ರಲ್ಲಿ ಇದು ಕರ್ನಾಟಕದಾದ್ಯಂತ ಬಿಡುಗಡೆಯಾಗಿತ್ತು.

See also  ಚಂಡಮಾರುತ ಪೀಡಿತರಿಗೆ ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು