News Kannada
Sunday, November 27 2022

ಮನರಂಜನೆ

ಡೆಡಿಕೇಷನ್ ಅಂದ್ರೆ ಇದಪ್ಪಾ! 10 ಕೆಜಿ ತೂಕ ಇಳಿಸಿಕೊಂಡ ಕಿಚ್ಚ - 1 min read

Photo Credit :

ಡೆಡಿಕೇಷನ್ ಅಂದ್ರೆ ಇದಪ್ಪಾ! 10 ಕೆಜಿ ತೂಕ ಇಳಿಸಿಕೊಂಡ ಕಿಚ್ಚ

ನಟನೆ ವಿಚಾರದಲ್ಲಿ ತುಂಬಾ ಡೆಡಿಕೇಟೆಡ್ ಆಗಿರುವ ನಟ ಸುದೀಪ್ ಅವರು ಯಾವ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ರೆಡಿಯಾಗಿ ಬಿಡುತ್ತಾರೆ. ಇದೀಗ ತಮ್ಮ ಮುಂಬರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ತೂಕ ಇಳಿಸಿಕೊಂಡು ತಯಾರಾಗಿದ್ದಾರೆ.

‘ಹೆಬ್ಬುಲಿ’ ಸಿನಿಮಾದಲ್ಲಿ ಕೊಂಚ ದಪ್ಪ ಕಾಣುತ್ತಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಸ್ಪಲ್ಪ ತೆಳ್ಳಗೆ ಆಗಿದ್ದಾರೆ. ಹೌದು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ಬರೋಬ್ಬರಿ 10 ಕೆ.ಜಿ ತೂಕ ಇಳಿಸಿಕೊಂಡಿರುವ ಸುದೀಪ್ ಸಖತ್ ಸಿಂಪಲ್ ಆಗಿ ಮಿಂಚಲಿದ್ದಾರೆ.
‘ನಂ.73 ಶಾಂತಿ ನಿವಾಸ’ ಸಿನಿಮಾದ ನಂತರ ಸುದೀಪ್ ಅವರು ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಸ್ಟೈಲಿಷ್ ಆಗಿ ಮಿಂಚಿದ್ದರು. ಆದರೆ ಈ ಸಿನಿಮಾದಲ್ಲಿ ಮಾತ್ರ ಒಬ್ಬ ಸಾಮಾನ್ಯ ಯುವಕನ ಪಾತ್ರ ವಹಿಸುವುದರಿಂದ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ.

ಅಂದಹಾಗೆ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪ್ರಮುಖ ಪಾತ್ರ ವಹಿಸಲಿದ್ದು, ಅಂಬಿ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸುದೀಪ್ ಅವರು ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ನಟಿ ಶ್ರುತಿ ಹರಿಹರನ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸುಹಾಸಿನಿ, ‘ಬ್ರಹ್ಮಗಂಟು’ ಖ್ಯಾತಿಯ ಗುಂಡಮ್ಮ ಗೀತಾ ಭಾರತಿ ಭಟ್ ನಟಿಸುತ್ತಿದ್ದಾರೆ.

ಸದ್ಯಕ್ಕೆ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಜ್ಯಾಕ್ ಮಂಜು ಬಂಡವಾಳ ಹೂಡುತ್ತಿದ್ದು, ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ತಮಿಳಿನ ‘ಪವರ್ ಪಾಂಡಿ’ ಚಿತ್ರದ ರೀಮೇಕ್ ಆಗಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ನವ ನಿರ್ದೇಶಕ ಗುರುದತ್ ಗಾಣಿಗ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.

See also  230 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ, ಪೊಗರು ಸಿನಿಮಾದ 'ಖರಾಬು' ಸಾಂಗ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು