News Kannada
Saturday, November 26 2022

ಮನರಂಜನೆ

ರಂಗೇರಿದ ಚುನಾವಣಾ ಕಾವು: ಸ್ಟಾರ್ ನಟರಿಂದ ಸಿಕ್ತು ಇನ್ನಷ್ಟು ರಂಗು - 1 min read

Photo Credit :

ರಂಗೇರಿದ ಚುನಾವಣಾ ಕಾವು: ಸ್ಟಾರ್ ನಟರಿಂದ ಸಿಕ್ತು ಇನ್ನಷ್ಟು ರಂಗು

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಲೇ ಇದ್ದು ಇದೀಗ ಪ್ರಚಾರಕ್ಕೆ ಸ್ಟಾರ್ ನಟರು ಇನ್ನಷ್ಟು ರಂಗು ತುಂಬುತ್ತಿದ್ದಾರೆ. ಬುಧವಾರ ರಾಕಿಂಗ್ ಸ್ಟಾರ್ ಯಶ್ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ತಾರಾ ರಂಗು ತುಂಬಿದರು.

ಇವರು ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಪರ ಬುಧವಾರ ಬೆಳಿಗ್ಗೆ ರೋಡ್ ಶೋ ನಡೆಸಿ ಮತಯಾಚಿಸಿದರು. ಸಂಜೆ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರ ಪ್ರಚಾರ ಕೈಗೊಂಡರು.

ಅದಲ್ಲದೆ ಸ್ಯಾಂಡಲ್ ವುಡ್ ನ ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಮತಯಾಚನೆ ನಡೆಸಿದರು.

See also  ಅಲೆಕ್ಸ್‌ ಪ್ಯಾರಿಶ್‌ ಪಾತ್ರಕ್ಕೆ "2017 ರ ಪೀಪಲ್ ಚಾಯ್ಸ್ ಅವಾರ್ಡ್" ಪಡೆದ ಪ್ರಿಯಾಂಕಾ ಚೋಪ್ರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು