News Kannada
Monday, September 26 2022

ಮನರಂಜನೆ

ಕರ್ನಾಟಕ ಅರಣ್ಯ ಇಲಾಖೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯಭಾರಿ - 1 min read

Photo Credit :

ಕರ್ನಾಟಕ ಅರಣ್ಯ ಇಲಾಖೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯಭಾರಿ

ಮೈಸೂರು: ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಚಲನಚಿತ್ರ ನಟ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಳ್ಳುವ ಮೂಲಕ ಇತರೆ ನಟರಿಗೆ ಮಾದರಿಯಾಗಿದ್ದಾರೆ.

ಗುಜರಾತ್ ನ ಅರಣ್ಯ ಇಲಾಖೆಗೆ ಬಾಲಿವುಡ್ ನ ಬಿಗ್ ಬಿ ಅಮಿತ್ ಬಚ್ಚನ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದ ಬೆನ್ನಲ್ಲೆ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯವರು ಸದಾ ಪ್ರಾಣಿ ಪಕ್ಷಗಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಹುದ್ದೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಒಪ್ಪಿಗೆ ಸೂಚಿಸುವ ಮೂಲಕ ಪ್ರಾಣಿ ಮತ್ತು ಪರಿಸರದ ಮೇಲಿರುವ ಪ್ರೀತಿಯನ್ನು ತೋರಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗಾಗಲೇ ಅರಣ್ಯ ಇಲಾಖೆಯವರು ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರ ನೀಡಿದ್ದು, ವಿಶ್ವಭೂಮಿ ದಿನಾಚರಣೆ, ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಇನ್ನಿತರ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯ ಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಮೈಸೂರು ಮೃಗಾಲಯಲ್ಲಿ ಹುಲಿ, ಆನೆ ಸೇರಿದಂತೆ ಹಲವಾರು ಪ್ರಾಣಿಗಳನ್ನ ದತ್ತು ಪಡೆದು ಪ್ರಾಣಿಗಳ ಪಾಲನೆಗೆ ಸಹಕರಿಸುತ್ತಿದ್ದಾರೆ. ಅದರಂತೆ ನಗರದ ಹೊರವಲಯದಲ್ಲಿರುವ ಕೆಂಪಯ್ಯನ ಹುಂಡಿಯಲ್ಲಿರುವ ತಮ್ಮ ಫಾರಂ ಹೌಸ್ ನಲ್ಲಿ ಕುದುರೆ ಸೇರಿದಂತೆ ಹಲವಾರು ಪ್ರಾಣಿ ಪಕ್ಷಗಳನ್ನು ಸಾಕುತ್ತಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಫಾರಂ ಹೌಸ್ ಗೆ ಆಗಮಿಸುವ ದರ್ಶನ್ ಕುದುರೆ ಸವಾರಿ ಮಾಡಿ ಪ್ರಾಣಿ ಪಕ್ಷಗಳನ್ನು ಜೊತೆ ಕಳೆಯಲಿದ್ದಾರೆ.

ಪ್ಲಾಂಟ್ ಎ ಟ್ರಿ, ಸಾಕ್ಷ್ಯ ಚಿತ್ರದಲ್ಲಿ ದರ್ಶನ್
ಜೂನ್ 5ರಂದು ಪರಿಸರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕಾಗಿಯೇ ನಿರ್ಮಿಸುತ್ತಿರುವ ಪ್ಲಾಂಟ್ ಎ ಟ್ರಿ ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಅಂದು ಸಾವಿರಾರು ಗಿಡಗಳನ್ನು ಸಹ ನಡೆಲಾಗುತ್ತಿದೆ. ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಕುರಿತು 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಾರು 20 ಸೆಕೆಂಡ್ ಗಳ ನಟಿಸಿದ್ದಾರೆ. ಈ ಸಾಕ್ಷ್ಯ ಚಿತ್ರಕ್ಕೆ ದರ್ಶನ್ ಹಣ ಪಡೆದಿಲ್ಲ ಎನ್ನಲಾಗಿದೆ. ಸದ್ಯದಲ್ಲಿಯೇ ಪ್ಲಾಂಟ್ ಎ ಟ್ರಿ ಚಿತ್ರೀಕರಣದಲ್ಲಿ ಪಾಲ್ಗೊಳುವ ದರ್ಶನ್ ಚಿತ್ರೀಕರಣ ನಡೆಯುವ ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ನಾಗರಹೊಳೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಈ ಎಲ್ಲಾ ಕಾರ್ಯಗಳಿಗೆ ದರ್ಶನ್ ಸ್ವಯಂ ಪ್ರೇರಣೆಯಿಂದಲೇ ಒಪ್ಪಿಕೊಂಡಿದ್ದಾರೆ. ದರ್ಶನ್ ಅವರೊಳಗೊಬ್ಬ ವನ್ಯ ಪ್ರೇಮಿ ಇದ್ದಾನೆ. ಅವರು ಅರಣ್ಯ, ವನ್ಯಜೀವಿ ಬಗ್ಗೆ ತೋರುವ ಪ್ರೀತಿ ಇತರರಿಗೆ ಮಾದರಿಯಾಗಿದೆ. ಅಲ್ಲದೆ ಇಲಾಖೆಯ ಯಾವುದೇ ಜಾಗೃತಿ ಕೆಲಸಗಳಿಗೆ ಮುಂದೆ ನಿಂತು ಸಹಕರಿಸುತ್ತಾರೆ. ಹೀಗಾಗಿ ಅರಣ್ಯ ಇಲಾಖೆ ದರ್ಶನ್ ಅವರನ್ನ ರಾಯಭಾರಿಯಾಗಿ ನೇಮಿಸಿದೆ ಎಂದು ಮಹದೇಶ್ವರ ಬೆಟ್ಟದ ವನ್ಯ ಜೀವಿ ಸಂರಕ್ಷಿತ ಪ್ರದೇಶದ ಡಿಸಿಎಫ್ ವಿ.ಏಡುಕೊಂಡಲು ಮಾಹಿತಿ ನೀಡಿದರು. 

See also  ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು