ಮುಂಬಯಿ: ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ ಜಹಾನ್ ಬಾಲಿವುಡ್ ನ ಹೆಸರಿಡದ ಚಿತ್ರವೊಂದರಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ಟೀಂ ಇಂಡಿಯಾದ ವೇಗಿ ಶಮಿ ಅವರ ವಿರುದ್ಧ ಜಹಾನ್ ದೈಹಿಕ ಹಿಂಸೆ ಹಾಗೂ ಮೋಸ ಮಾಡಿದ ದೂರು ದಾಖಲಿಸಿದ್ದರು. ಇದರ ಬಳಿಕ ಅವರಿಬ್ಬರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ.
ಜಹಾನ್ ಗೆ ಬಾಲಿವುಡ್ ನಿರ್ದೇಶ ಅಮ್ಜದ್ ಖಾನ್ ಅವರು ಸಿನಿಮಾವೊಂದರಲ್ಲಿ ಅವಕಾಶ ನೀಡಿದ್ದಾರೆ. ಇದಕ್ಕೆ ಇನ್ನಷ್ಟೇ ಹೆಸರಿಡಬೇಕಾಗಿದೆ.
ಶಮಿಯಿಂದ ಪ್ರತ್ಯೇಕವಾದ ಬಳಿಕ ಮತ್ತೆ ಕ್ಯಾಮರಾ ಮುಂದೆ ಹೋಗಬೇಕೆಂದು ಬಯಸಿದೆ ಎಂದು ರೂಪದರ್ಶಿಯಾಗಿದ್ದ ಜಹಾನ್ ತಿಳಿಸಿದ್ದಾರೆ.