ಮುಂಬೈ: ಆಗಸ್ಟ್ 15ರಂದು ತೆರೆಗೆ ಬರಲು ರೆಡಿಯಾದ ಮಿಲಾಸ್ ಜವೇರಿ ನಿರ್ದೇಶನದ, ಜಾನ್ ಅಬ್ರಹಾಂ, ಮನೋಜ್ ಬಾಜಪೇಯಿ ಅಭಿನಯದ ‘ಸತ್ಯಮೇವ ಜಯತೇ’ ಚಿತ್ರದ ದೃಶ್ಯವೊಂದಕ್ಕೆ ಕತ್ತರಿ ಹಾಕುವಂತೆ ಶಿಯಾ ಸಮುದಾಯದ ಮುಸ್ಲಿಮರು ಪೊಲೀಸರಿಗೆ ದೂರು ನೀಡಿದ್ದಾರೆ.
ಚಿತ್ರದ ಟ್ರೈಲರ್ ನಲ್ಲಿ ಬರುವ ‘ಮಾತಂ’ (ಸಂತಾಪ ಸೂಚಿಸುವ ದೃಶ್ಯ) ಕ್ಲಿಪ್ಪಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಶಿಯಾ ಸಮುದಾಯದ ಮುಖ್ಯಸ್ಥ ನಿಸಾರ್ ಹೈದರ್ ಅವರು ಚಿತ್ರ ತಂಡದ ದೂರು ನೀಡಿದ್ದಾರೆ ಎಂದು ದಕ್ಷಿಣ ವಲಯದ ಡಿಸಿಪಿ ವಿ ಸತ್ಯನಾರಾಯಣ ಅವರಿಗೆ ಹೇಳಿದ್ದಾರೆ.
ಕೂಡಲೇ ಕ್ರಮ ಕೈಗೊಳ್ಳುವಂತೆ ದಬೀರ್ ಪುರ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸತ್ಯನಾರಾಯಣ ಹೇಳಿದರು.