News Kannada
Tuesday, January 31 2023

ಮನರಂಜನೆ

ನಿಮ್ಮೊಂದಿಗೆ ನಾವಿದ್ದೇವೆ, ನೊಂದವರಿಗೆ ಸಾಂತ್ವನ ಹೇಳಿದ ನಟಿ ರಶ್ಮಿಕಾ ಮಂದಣ್ಣ

Photo Credit :

ನಿಮ್ಮೊಂದಿಗೆ ನಾವಿದ್ದೇವೆ, ನೊಂದವರಿಗೆ ಸಾಂತ್ವನ ಹೇಳಿದ ನಟಿ ರಶ್ಮಿಕಾ ಮಂದಣ್ಣ

ಮಡಿಕೇರಿ: ಖ್ಯಾತ ಚಲನಚಿತ್ರ ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಅತಿವೃಷ್ಟಿ ಹಾನಿಯಿಂದ ನೊಂದವರಿಗೆ ಸಾಂತ್ವನ ಹೇಳಿದರು. ವಿರಾಜಪೇಟೆಗೆ ಭೇಟಿ ನೀಡಿದ ಅವರು ಸುಮಾರು 31 ಸಂತ್ರಸ್ತರಿಗೆ ತಲಾ 10 ಸಾವಿರ ರೂ.ಗಳಂತೆ ಧನ ಸಹಾಯ ಮಾಡಿದರು.

ವಿರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ಸಂತ್ರಸ್ತರನ್ನು ಭೇಟಿಯಾದ ರಶ್ಮಿಕಾ ದು:ಖವನ್ನು ಹಂಚಿಕೊಂಡರು. ನಡೆದು ಹೋಗಿರುವ ಅನಾಹುತಕ್ಕೆ ಯಾರು ಆತ್ಮಸ್ಥೈರ್ಯ ಕಳೆದು ಕೊಳ್ಳಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ಇದು ನನ್ನ ಮೊದಲ ಹೆಜ್ಜೆಯಾಗಿದ್ದು, ಇನ್ನು ಮುಂದೆಯೂ ಕುಟುಂಬ ಸದಸ್ಯರು ಸೇರಿದಂತೆ ನಾವೆಲ್ಲರೂ ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಮಾತನಾಡಿ ಸಹಾಯ ಹಸ್ತದ ಭರವಸೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಮಕ್ಕಂದೂರಿನ ಸಂತ್ರಸ್ತೆ ಚೆನ್ನಪಂಡ ಕವಿತಾ ಅವರು ಆ.15 ರಿಂದ 17 ರ ವರೆಗೆ ತಾವು ಅನಿಭವಿಸಿದ ಕಷ್ಟದ ಕ್ಷಣಗಳನ್ನು ಹಂಚಿಕೊಂಡರು. ಹೆಬ್ಬೆಟ್ಟಗೇರಿಯ ಗಣಪತಿ ಬಿದ್ದಪ್ಪ, ಚಿಣ್ಣಪ್ಪ, ಕಾಂಡನ ಕೊಲ್ಲಿಯ ಪ್ರೇಮ ಮಾತನಾಡಿದರು.

ವಿರಾಜಪೇಟೆಯ 6, ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ 25 ಸಂತ್ರಸ್ತರು ಸೇರಿ 31 ಮಂದಿಗೆ ತಲಾ 10 ಸಾವಿರ ರೂ.ನಂತೆ ರಶ್ಮಿಕಾ ಮಂದಣ್ಣ ಧನ ಸಹಾಯ ಮಾಡಿದರು. ವಿರಾಜಪೇಟೆ ಆಟೋ ಚಾಲಕರ ಸಂಘದ ಅಧ್ಯಕ್ಷ ಶಶಿಧರನ್ ಉಪಸ್ಥಿತರಿದ್ದರು.

See also  ಅಲೆಕ್ಸ್‌ ಪ್ಯಾರಿಶ್‌ ಪಾತ್ರಕ್ಕೆ "2017 ರ ಪೀಪಲ್ ಚಾಯ್ಸ್ ಅವಾರ್ಡ್" ಪಡೆದ ಪ್ರಿಯಾಂಕಾ ಚೋಪ್ರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು