ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ದ ಮೀ ಟೂ ಆರೋಪ ಎಸಗಿದ ನಟಿ ಶ್ರುತಿ ಹರಿಹರನ್ ಅವರು ಗುರುವಾರ ಮಧ್ಯರಾತ್ರಿ ಅರ್ಜುನ್ ಸರ್ಜಾ ಅವರ ಸ್ನೇಹಿತನ ವಿರುದ್ಧ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರ್ಜುನ್ ಸರ್ಜಾ ಅವರ ಆಪ್ತ ಪ್ರಶಾಂತ್ ಸಂಬರಗಿ ಅವರ ವಿರುದ್ಧ ಶ್ರುತಿ ಹರಿಹರನ್ ಅವರು ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣದಡಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸುವ ಮುನ್ನಾ ಗುರುವಾರ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಫಿಲ್ಮ್ ಛೇಂಬರ್ ನಲ್ಲಿ ವಿಚಾರಣೆ ಸಭೆ ನಡೆಯಿತು. ಈ ಸಭೆಯಲ್ಲಿ ನಟ ಅರ್ಜುನ್ ಸರ್ಜಾ, ನಟಿ ಶ್ರುತಿ ಹರಿಹರನ್ ಅವರನ್ನು ಹಿರಿಯ ನಟರು ವಿಚಾರಣೆ ನಡೆಸಿ ಸಂಧಾನಕ್ಕೆ ಪ್ರಯತ್ನಿಸಿದರು ವಿಫಲವಾಗಿತ್ತು. ಸಭೆಯಲ್ಲಿ ಹಿರಿಯ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಅಧ್ಯಕ್ಷ ಚಿನ್ನೇಗೌಡ. ಸಾರಾ ಗೋವಿಂದ್, ಮುನಿರತ್ನ ಸೇರಿದಂತೆ ಅನೇಕ ಮಂದಿ ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ, ‘ನನ್ನ ಮೇಲಿರುವ ಆರೋಪದಿಂದ ತುಂಬಾ ನೋವಾಗಿದೆ. ಚಿತ್ರರಂಗದಲ್ಲಿರುವ ಪ್ರತಿಯೊಬ್ಬ ಕಲಾವಿದ, ನಿರ್ದೇಶಕ ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ತಾಯಿಯ ಹಾಗೇ. ಫಿಲ್ಮ್ ಛೇಂಬರ್ ನವರು ವಿಚಾರಣೆಗೆ ಕರೆದ ಹಿನ್ನೆಲೆ ಭಾಗಿಯಾಗಿದ್ದೇನೆ. ಇದರಿಂದ ನನ್ನ ಮನಸ್ಸಿನ ನೋವನ್ನು ಬಿಚ್ಚಿಟ್ಟೆ. ಈ ಆರೋಪದಿಂದ ನನ್ನ ಕುಟುಂಬ, ನಂಬಿದವರಿಗೆ, ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ತೆಲುಗು, ತಮಿಳು, ಕನ್ನಡ ಸೇರಿದಂತೆ ಕೇರಳದಲ್ಲಿ ನನ್ನ ತೇಜೋವಧೆ ಮಾಡಿದ್ದಾರೆ. ಪ್ರಕರಣ ಕೋರ್ಟ್ ಗೆ ಹೋಗಿದ್ದು ಮುಂದೊಂದು ದಿನ ಇದರ ಹಿಂದಿರುವ ಕಾಣದ ಕೈ ಯಾರದ್ದೂ ಎಂದು ತಿಳಿದು ಬರಲಿದೆ. ಕಾಂಪ್ರಮೈಸ್ ಎಂಬ ಪದಕ್ಕೆ ಜಾಗನೇ ಇಲ್ಲ. ಇದಕ್ಕೆ ನಾನು ಕಾಂಪ್ರಮೈಸ್ ಆದರೆ ನಾನು ತಪ್ಪಿತಸ್ಥನಾಗುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ ಹರಿಹರನ್ ಅವರು, ಒಂದು ಸಮಾಜದಲ್ಲಿ ಹೆಣ್ಣಿಗೆ ಅನ್ಯಾಯವಾದರೇ ಕೊನೆಗೆ ಅವಳೇ ತಪ್ಪಾಗಿ ಕಾಣುತ್ತಳೆ. ಫಿಲ್ಮ್ ಛೇಂಬರ್ ಮೇಲಿನ ಗೌರದದಿಂದ ಇದುವರೆಗೆ ಕಾನೂನು ಮೆಟ್ಟಿಲೇರಲಿಲ್ಲ. ಶುಕ್ರವಾದರವರೆಗೆ ಕಾನೂನು ಪ್ರಕಾರ ಹೋರಾಟಕ್ಕೆ ಕಾಯುತ್ತೇನೆ ಎಂದಿದ್ದರು.