ಬೆಂಗಳೂರು: ದಿ ವಿಲನ್ ಚಿತ್ರ ಬಿಡುಗಡೆಯಾದ ದಿನಗಳಿಂದ ಒಂದಲ್ಲ ಒಂದು ವಿವಾದವನ್ನು ಎದುರಿಸುತ್ತಿದ್ದು ಇದೀಗ ಹೊಸ ಆರೋಪವೊಂದು ನಿರ್ದೇಶಕ ಪ್ರೇಮ್ ಹಾಗೂ ನಟ ಸುದೀಪ್ ಮೇಲೆ ದೂರಾಗಿದೆ.
ವಿಲನ್ ಚಿತ್ರದ ಹಾಡೊಂದರಲ್ಲಿ ಸುದೀಪ ಅವರು ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿ ಅವಮಾನ ಮಾಡಿದ್ದಾರೆ. ಈ ಸಂಬಂಧ ನಿರ್ದೇಶಕ ಪ್ರೇಮ್ ಹಾಗೂ ನಟ ಸುದೀಪ್ ಅವರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ಸಲ್ಲಿಸಿದೆ.
ಈ ದೂರನ್ನು ಕನ್ನಡ ಚಳವಳಿ ನಾಗೇಶ್ ಎನ್ನುವವರು ನೀಡಿದ್ದು, ದೂರಿನಲ್ಲಿ ಚಿತ್ರದ ತಂಡದ ಸುದೀಪ್ ಹಾಗೂ ಪ್ರೇಮ್ ಅವರು ಕ್ಷಮೆಯಾಚಿಸದಿದ್ದರೆ ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ದಿ ವಿಲನ್ ಚಿತ್ರದ ವಿರುದ್ಧವಿವಾದಗಳಿ ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದೆ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ನಿರ್ದೇಶಕ ಪ್ರೇಮ್ ಆ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅದಲ್ಲದೆ ಚಿತ್ರದಲ್ಲಿ ಸುದೀಪ್ ಅವರು ಶಿವರಾಜ್ ಕುಮಾರ್ ಗೆ ಹೊಡೆರೆಂಬುದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಂದು ವಿವಾದಕ್ಕೆ ದಿ ವಿಲನ್ ಕಾರಣವಾಗುತ್ತಿದೆ.