ಬೆಂಗಳೂರು: ಸ್ಯಾಂಡಲ್ ವುಡ್ ನ ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್ ಅವರ ಸೀಮಂತ ಸಂಭ್ರಮು ಇಂದು ನೆರವೇರಿತು.
ಈ ಸಂಭ್ರಮದಲ್ಲಿ ಕುಟುಂಬ ಸದಸ್ಯರ ಹಾಗೂ ಸಿನಿಮಾ ನಟ- ನಟಿಯರು ಪಾಲ್ಗೊಂಡು ರಾಧಿಕಾಗೆ ಶುಭಕೋರಿದರು. ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೆಯಿತು.
ರಾಧಿಕಾ-ಯಶ್ ಹಸಿರು ಬಣ್ಣದ ಬಟ್ಟೆಯಲ್ಲಿ ಕಂಗೋಳಿಸಿದರು.ಪುನೀತ್ ರಾಜ್ ಕುಮಾರ್ ದಂಪತಿ ಸೇರಿದಂತೆ ನಟಿಯರಾದ ಮಾಳವಿಕಾ ಅವಿನಾಶ್, ತಾರಾ, ಸುಧರಾಣಿ, ಜಯಂತಿ ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದರು.
ಮಗು ಜನನಕ್ಕೆ ವೈದ್ಯರು ಡಿ.9ರಂದು ಡೇಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಜೋಡಿ ಮದುವೆಯಾದ ದಿನವೇ ರಾಂಕಿಂಗ್ ಸ್ಟಾರ್ ಮನೆಗೆ ಕಂದಮ್ಮನ ಎಂಟ್ರಿ ಆಗಲಿದೆ.