ಮುಂಬೈ: ಗಣಪತಿ ದೇವಸ್ಥಾನದ ಒಳಗಡೆ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸದಾನಂದ ಅಲಿಯಾಸ್ ಪಪ್ಪು ಲಾಡ್(51) ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಈ ಘಟನೆ ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಬಿಲ್ಡರ್ಸ್ ಗಳ ಹಾವಳಿಯಿಂದ ನೊಂದು ನೇಣಿಗೆ ಶರಣಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಐಪಿಸಿ ಸೆಕ್ಷನ್ 306 ಪ್ರಕರಣದಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಶರು ತಿಳಿಸಿದ್ದಾರೆ.
ಲಾಡ್ ಅವರು ಎಲ್ ಡಿ ಪ್ರೋಡಕ್ಷನ್ ಅಡಿಯಲ್ಲಿ ಮರಾಠಿ ಚಿತ್ರವನ್ನು ನಿರ್ಮಾಣ ಆಡಿದ್ದರು.