ಚಿತ್ರದ ಕಥೆಯ ನಾಯಕನಿಗಾಗಿ ಸಾಕಷ್ಟು ಶೋಧ ನಡೆಸಿದರೂ ಸಿಗದ ಕಾರಣ ಕೊನೆಗೆ ನಾನೇ ನಾಯಕನಾಗ ಬೇಕಾಯಿತು ಎಂದು ಕಾರ್ತಿಕ್ ಅತ್ತಾವರ ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ. ನಾನೇ ಮಾಡಿದೆ ಕಥೆಗೆ ನಾನೇ ಜೀವ ತುಂಬಿರುವುದು ಖುಷಿಯ ಸಂಗತಿ. ಆದರೂ ಚಿತ್ರದ ಬಿಡುಗಡೆ ತುಂಬಾ ಕುತೂಹಲದಿಂದ ಕಾಯುತ್ತಿದ್ದು ಪ್ರೇಕ್ಷಕರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.
ಕರಾವಳಿಯ ಧೈವಾರಾಧನೆ ಜೊತೆಗೆ ಹಲವು ಘಟನೆಗಳನ್ನು ಇಟ್ಟುಕೊಂಡು ಕಥೆಯನ್ನು ರಚಿಸಿದ್ದು ಸಿನಿಮಾ ರಸಿಕರಿಗೆ ಸಸ್ಪೆನ್ಸ್ ಮತ್ತು ಥ್ರಿಲ್ ನೀಡುವುದು ಖಚಿತವಾಗಿದೆ. ದುಬೈ, ಜರ್ಮನಿ ಹಾಗು ಅಮೆರಿಕಾದಲ್ಲೂ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. ಕರಾವಳಿಯಲ್ಲಿ ನಡೆಯುವ ಭೂತರಾಧನೆ ಮತ್ತು ಅದರ ಹಿಂದೆ ನೆಡೆಯುವ ಕೆಲವು ಘಟನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆದಿದ್ದು ಕೆಲವೊಂದು ಸಂಗತಿಗಳು ನಮ್ಮ ಕಣ್ಣಿಗೆ ಕಂಡರೂ ನಮ್ಮ ಅನುಭವಕ್ಕೆ ಬಂದರೂ ಮಾತಿನಲ್ಲಿ ಹೇಳಲಾಗುವುದಿಲ್ಲ. ಹೀಗೆ ಹೇಳಲಾಗದ ಕೆಲವು ವಿಷಯಗಳ ಚಿತ್ರಣವೇ “ಅನುಕ್ತ”.
ಈ ಚಿತ್ರದಲ್ಲಿ ಅನುಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಅತ್ತಾವರ್ ಗೆ ನಾಯಕಿಯಾಗಿ ಸಂಗೀತಾ ಭಟ್ ಜೊತೆಯಾಗಿದ್ದು ಬಹುಭಾಷ ನಟ ಸಂಪತ್ ರಾಜ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ದುಬೈ ಅಲ್ಲಿ ನೆಲೆಸಿರುವ ಉಡುಪಿ ಮೂಲದ ಉದ್ಯಮಿ ಹರಿ ಬಂಗೇರ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರವನ್ನು ಅಶ್ವಥ್ ಸಾಮ್ಯುವಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಫ಼ೆಬ್ರವರಿ ಒಂದರಂದು ರಾಷ್ಟದ್ಯಾಂತ ತೆರೆ ಕಾಣಲಿದೆ.