ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿ ಅವರು ಹೊರಹೊಮ್ಮಿದ್ದಾರೆ. ಭಾನುವಾರ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ಶಶಿ ಅವರು ಕೊನೆಯ ಸುತ್ತಿಗೆ ಉಳಿದು ಕೊಂಡಿದ್ದರು.
ಜನರ ಮತಗಳ ಆಯ್ಕೆಯ ಅನುಸಾರ ಶಶಿ ಅವರು ವಿಜೇತರಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಂಡು ಬರುತ್ತಿದ್ದು ಈ ಭಾರಿ 20 ಸ್ಪರ್ಧಾಳುಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು.
ಶನಿವಾರ ರ್ಯಾಪಿಡ್ ರಶ್ಮಿ ಹಾಗೂ ಆಂಡಿ ಮನೆಯಿಂದ ಹೊರ ನಡೆದಿದ್ದರು. ಗ್ರಾಂಡ್ ಫಿನಾಲೆಗೆ ನಟಿ ಕವಿತ, ಗಾಯಕ ನವೀನ್ ಸಜ್ಜು ಹಾಗೂ ರೈತ ಶಶಿ ಅವರು ಪಾದಾರ್ಪಣೆ ಮಾಡಿದ್ದರು.
ಭಾನುವಾರ ಮನೆಯೊಳಗೆ ನಡೆದ ಕೊನೆಯ ಸುತ್ತಿನ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕವಿತಾ ಅವರು ಹೊರ ನಡೆದಿದ್ದರು. ಈ ಮೂಲಕ ಗ್ರಾಂಡ್ ಫಿನಾಲೆಗೆ ನವೀನ್ ಹಾಗೂ ಶಶಿ ಆಯ್ಕೆಯಾಗಿದ್ದರು. ಮಾಡರ್ನ್ ರೈತ ಶಶಿ ಅವರು ವಿಜೇತರಾಗುವ ಮೂಲಕ ಬಿಗ್ ಬಾಸ್ ಸೀಸನ್ 6ರ ಕಿರೀಟ ಹಾಗೂ 50ಲಕ್ಷ ಹಣ ಅವರ ಪಾಲಾಗಿದೆ.