ಚಿಕ್ಕಮಗಳೂರು: ಧಾರವಾಹಿ ಚಿತ್ರೀಕರಣಕ್ಕಾಗಿ ಬಳಸಿಕೊಂಡ ಮನೆಯ ಬಾಡಿಗೆ ಉಳಿಸಿಕೊಂಡ ಆರೋಪ ಎದುರಿಸುತ್ತಿರುವ ಚಿತ್ರನಟ ಸುದೀಪ್ ಗೆ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯವು ಬುಧವಾರ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಇಂದು ಸುದೀಪ್ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ಗೈರುಹಾಜರಾದ ಹಿನ್ನೆಲೆಯಲ್ಲಿ ಜೆಎಂಎಫ್ ಸಿ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ವಾರಸ್ದಾರ ಧಾರವಾಹಿ ಚಿತ್ರೀಕರಣ ಮಾಡಲು ದೀಪಕ್ ಮಯೂರ್ ಎಂಬವರ ಮನೆ, ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಬಾಡಿಗೆ ನೀಡದೆ, ತೋಟವನ್ನು ಹಾನಿಗೊಳಿಸಿ ವಂಚಿಸಲಾಗಿದೆ ಎಂದು ದೀಪಕ್ ಅವರು ದೂರು ದಾಖಲಿಸಿದ್ದಾರೆ.
ತೋಟ ಹಾಳುಗೆಡವಿದ ಪರಿಣಾಮ ಸುಮಾರು ಒಂದುವರೆ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಇದನ್ನು ಕೊಡಬೇಕು ಎಂದು ದೀಪಕ್ ಹೇಳಿದ್ದರು. ಆದರೆ ಇದಕ್ಕೆ ಸುದೀಪ್ ಕ್ರಿಯೇಶನ್ಸ್ ನಿರಾಕರಿಸಿತ್ತು.