News Kannada
Friday, December 09 2022

ಮನರಂಜನೆ

ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಗೆ ಹುಟ್ಟು ಹಬ್ಬದ ಸಂಭ್ರಮ

Photo Credit :

ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಗೆ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ಎಂದೇ ಖ್ಯಾತರಾದ ನಟಿ ರಕ್ಷಿತಾ ಪ್ರೇಮ್ ಅವರು ಇಂದು ತಮ್ಮ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಅಭಿನಯಿಸಿರುವ ರಕ್ಷಿತಾ ಅವರು 2002ರಲ್ಲಿ ‘ಅಪ್ಪು’ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆ ನಂತರ ಚಾಲೆಂಜಿಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ನಟಿಸಿದ ‘ಕಲಾಸಿಪಾಳ್ಯ’ ಚಿತ್ರದ ಅಭಿನಯದ ಬಳಿಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರೂ. ಆ ನಂತರ ಜೋಡಿ ಕನ್ನಡದಲ್ಲಿ ಹಿಟ್ ಚಿತ್ರಗಳಲ್ಲಿ ಜೋಡಿಯಾಗಿ ಅಭಿಯಿಸಿದ್ದರು. ಅದಲ್ಲದೆ ತೆಲುಗಿನಲ್ಲಿ ಸ್ಟಾರ್ ನಟರಾದ ಚಿರಂಜೀವಿ, ನಾಗಾರ್ಜುನ್, ಮಹೇಶ್ ಬಾಬು, ಜೂನಿಯರ್ ಎನ್ ಟಿಆರ್, ಜಗಪತಿ ಬಾಬು ಹಾಗೂ ರವಿತೇಜ ಅವರಿಗೆ ನಾಯಕಿಯಾಗಿ ಅಭಿನಯಿಸಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ತಮಿಳಿನಲ್ಲಿ ಇಳಯಪತಿ ವಿಜಯ್ ಅವರ ಜತೆಗೆ ನಟಿಸಿದ್ದು. 2007ರಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಕ್ಷಿತಾ ಆ ಬಳಿಕ ಸಿನಿಮಾ ನಟನೆಯಿಂದ ದೂರ ಸರಿದಿದ್ದರು. ಬಳಿಕ ರಾಜಕೀಯಕ್ಕೆ ಪ್ರವೇಶ ಮಾಡಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಕನ್ನಡ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ತರುಣ್ ಸುಧೀರ್ ಅವರು ಟ್ವೀಟ್ ನಲ್ಲಿ ರಕ್ಷಿತಾ ಅವರಿಗೆ ಶುಭಕೋರಿದ್ದಾರೆ. 

See also  ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ: ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು