ಮೈಸೂರು: ಗಾಯಕ ವಿಜಯಪ್ರಕಾಶ್ ಅವರ ತಂದೆ ರಾಮಶೇಷು(72) ಅನಾರೋಗ್ಯದಿಂದ ಭಾನುವಾರ ಸಾವನ್ನಪ್ಪಿದ್ದಾರೆ.
ವಿಜಯ ಪ್ರಕಾಶ್ ಅವರು ಅಮೆರಿಕದ್ದಲ್ಲಿದ್ದ ಅವರ ಮೈಸೂರಿಗೆ ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಮದ ತಿಳಿದು ಬಂದಿದೆ.
ರಾಮಶೇಷು ಅವರು ಖ್ಯಾತ ಸಂಗೀತಗಾರರಾಗಿದ್ದು ಇವರು ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಅನೇಕ ಸಂಗಿತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಪತ್ನಿ ಲೋಪಾಮುದ್ರಾ ಸಹ ಗಾಯಕರು ಮತ್ತು ಸಂಗೀತ ಶಿಕ್ಷಕರೂ ಆಗಿದ್ದಾರೆ. ಇವರಿಗೆ ಪತ್ನಿ ಗಾಯಕ ಲೋಪಾಮುದ್ರಾ, ಪುತ್ರರಾದ ಫಣೀಂದ್ರಕುಮಾರ್ ಹಾಗೂ ಗಾಯಕ ವಿಜಯ ಪ್ರಕಾಶ್ ಇದ್ದಾರೆ.