News Kannada
Monday, December 05 2022

ಮನರಂಜನೆ

ಸಿನೆರಮಾ ’19’ ರಾಷ್ಟ್ರಮಟ್ಟದ ಕಿರು ಚಲನಚಿತ್ರೋತ್ಸವಕ್ಕೆ ಚಾಲನೆ

Photo Credit :

ಸಿನೆರಮಾ '19’ ರಾಷ್ಟ್ರಮಟ್ಟದ ಕಿರು ಚಲನಚಿತ್ರೋತ್ಸವಕ್ಕೆ ಚಾಲನೆ

ಮೈಸೂರಿನ ಬೋಗಾದಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗವು ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರು ಚಲನಚಿತ್ರೋತ್ಸವ ಸಿನೆರಮಾ’19’ ಅನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಸುರೇಶ ಅವರು ಏಪ್ರಿಲ್ 24ರ ಬುಧವಾರ ಬೆಳಿಗ್ಗೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, 80ರ ದಶಕದ ಆರಂಭದಲ್ಲಿ ಹಾಗೂ ಪ್ರಸ್ತುತ ದಿನಗಳಲ್ಲಿ ಸಿನೆಮಾ ಹೇಗೆ ಭಿನ್ನವಾಗಿದೆ ಎಂಬುದನ್ನು ವಿವರಿಸಿದರು. ಪ್ರಮುಖವಾಗಿ ಚಿತ್ರ ನಿರ್ಮಾಪಕರು ಯಾವ ರೀತಿಯ ಕಥೆ ಆಯ್ಕೆ ಮಾಡುತ್ತಾರೆ ಮತ್ತು ಅದನ್ನು ಹೇಗೆ ವೀಕ್ಷಕರಿಗೆ ತಲುಪಿಸುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಚಿತ್ರ ತಯಾರಿಕೆಗೂ ಮುನ್ನ ಅರ್ಥ ಮಾಡಿಕೊಳ್ಳಬೇಕು. ಅವರು ತಮ್ಮ ಸಿನೆಮಾಗಳ ಬಗ್ಗೆ ಮಾತನಾಡಿ, “ನಾನು ಹೆಚ್ಚಾಗಿ ಕಲಾತ್ಮಕ ಚಿತ್ರಗಳನ್ನು ಇಷ್ಟಪಡುತ್ತೇನೆ ಏಕೆಂದರೆ ಅವು ಹೆಚ್ಚು ಸಾಮಾಜಿಕ ಸಂದೇಶವನ್ನು ತಿಳಿಸುತ್ತವೆ. ಹಾಗೂ ನಾನು ನನ್ನ ಚಿತ್ರಗಳಿಗೆ ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣ ಮಾಡುತ್ತೇನೆ. ಸಿನೆಮಾ ಒಂದು ದೊಡ್ಡ ಸಮುದ್ರದಂತೆ. ಅದರಲ್ಲಿ ಈಜುವುದನ್ನ ಚಿತ್ರ ನಿರ್ಮಾಪಕರು ಕಲಿಯಬೇಕು” ಎಂದು ಅಭಿಪ್ರಾಯಪಟ್ಟರು. ಬಳಿಕ 90 ನಿಮಿಷಗಳ ಸಂವಾದ ಕಾರ್ಯಕ್ರಮದಲ್ಲಿ ಬಿ.ಸುರೇಶ ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಅವರು “ಪಿಕ್ಸೆಲ್‍ಆರ್ಟ್” ಎಂಬ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪೋರ್ಟ್‍ಪೋಲಿಯೋ ಪ್ರದರ್ಶನವನ್ನು ಉದ್ಘಾಟಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ನಟಿ ಐಂದ್ರಿತಾ ರೇ ಭಾಗವಹಿಸಿ ವಿವಿಧ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಎಲ್ಲಾ ಚಿತ್ರಗಳು ಅದರದೇ ಆದ ಮೌಲ್ಯಗಳನ್ನು ಹೊಂದಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗು ಆಂಗ್ಲ ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಇವುಗಳಲ್ಲಿ ಉತ್ತಮ ಚಿತ್ರಗಳನ್ನು ಆಯ್ಕೆಮಾಡುವುದು ಕಷ್ಟದ ಕೆಲಸವೆಂದು ತೀರ್ಪುಗಾರರಲ್ಲಿ ಒಬ್ಬರಾದ ರವಿಶಂಕರ್ ಎಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿದ್ಯಾ ಪೈ ಸಿ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ರಮ್ಯಾ.ಕೆ.ಪ್ರಸಾದ್, ನಿರ್ದೇಶಕರಾದ ಬ್ರಹ್ಮಚಾರಿ ಸುನಿಲ್ ಧರ್ಮಪಾಲ್ ಹಾಗೂ ಸಂಚಾಲಕರಾದ ಬ್ರಹ್ಮಚಾರಿ ವೇಣುಗೋಪಾಲ್‍ರವರು ಉಪಸ್ಥಿತರಿದ್ದರು.

ಅತ್ಯುತ್ತಮ ಕಿರುಚಲನಚಿತ್ರಗಳು:
ಪ್ರಥಮ – ಬಿಂದಿ (ನಿರ್ದೇಶಕ – ನಿಖಿಲ್ ಸಂಕರ್), ಕೊಚ್ಚಿ
ದ್ವಿತೀಯ – ಝೀಟ (ನಿರ್ದೇಶಕ – ಕೆವಿನ್ ಕರಿಪ್ಪೆರಿ), ಮುಂಬೈ
ತೃತೀಯ – ಉನರ್ತಲ್ (ನಿರ್ದೇಶಕ – ಬಾಲಾಜಿ ಎಸ್.ಬಿ.ಆರ್) ಕೊಯಮತ್ತೂರು

ಅತ್ಯುತ್ತಮ ನಾಮನಿರ್ದೇಶನಗಳು (ವಿಶೇಷ ವಿಭಾಗದ ಪ್ರಶಸ್ತಿಗಳು):
ಅತ್ಯುತ್ತಮ ನಿರ್ದೇಶನÀ – ನಿಖಿಲ್ ಸಂಕರ್ (ಚಿತ್ರ – ಬಿಂದಿ) ಕೊಚ್ಚಿ
ಅತ್ಯುತ್ತಮ ಛಾಯಾಗ್ರಹಣ – ಸುನಿಲ್ ಕಾರ್ತಿಕೇಯನ್ (ಚಿತ್ರ – ಜೀಟ) ಮುಂಬೈ
ಅತ್ಯುತ್ತಮ ಸಂಕಲನ – ಅಸ್ವಿನ್ (ಚಿತ್ರ – ಉನರ್ತಲ್) ಕೊಯಮತ್ತೂರು
ಅತ್ಯುತ್ತಮ ನಟನೆ – ಜಿತಿನ್ ಬಾಬು (ಚಿತ್ರ – ಪೋತಯನ್) ತ್ರಿಶ್ಯೂರ್

See also  ಉದ್ಯಮಿ ಸಚಿನ್ ಗಾಗಿ ನಟಿಯರಿಬ್ಬರ ಫೈಟ್ : ಕಾರುಣ್ಯ ವಿರುದ್ಧ ಕಿರುಕುಳ ಆರೋಪ ?

ಛಾಯಾಚಿತ್ರ ಸ್ಪರ್ಧೆಯ ವಿಜೇತರು:
ಪ್ರಥಮ – ಕಮಲ್ ವಿ, ನ್ಯಾಷನಲ್ ಡಿಗ್ರಿ ಕಾಲೇಜು, ಬೆಂಗಳೂರು

ಅತ್ಯುತ್ತಮ ಕಿರುಚಲನಚಿತ್ರಗಳು: (ಅಮೃತ ಪ್ರಶಸ್ತಿಗಳು)
ಪ್ರಥಮ – ಪ್ಯಾರಡೈಸ್ (ನಿರ್ದೇಶಕ – ಹರಿಗೋಬಿಂದ್ ಪಚಟ್)
ದ್ವಿತೀಯ – ಕೇ ದುನ್ ಶುಕ್ರಿಯಾ (ನಿರ್ದೇಶಕ – ಜುಬಿನ್ ಪೌಲ್)
ತೃತೀಯ – ಯು ಆರ್ ಇಂಪಾರ್ಟೆಂಟ್ (ನಿರ್ದೇಶಕ – ಹೇಮಂತ ಪಿ.ಎಂ)
ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿ – ಅಶ್ವಿನ್ ಸಿ (ನೇತ್ರದಾಹಂ)

ಅತ್ಯುತ್ತಮ ನಾಮನಿರ್ದೇಶನಗಳು (ವಿಶೇಷ ವಿಭಾಗದ ಪ್ರಶಸ್ತಿಗಳು):
ಅತ್ಯುತ್ತಮ ನಿರ್ದೇಶನ – ಜುಬಿನ ಪೌಲ್ (ಚಿತ್ರ – ಕೇ ದುನ್ ಶುಕ್ರಿಯಾ)
ಅತ್ಯುತ್ತಮ ಛಾಯಾಗ್ರಹಣ – ಹರಿಗೋಬಿಂದ್ ಪಚಟ್ (ಚಿತ್ರ – ಪ್ಯಾರಡೈಸ್)
ಅತ್ಯುತ್ತಮ ಸಂಕಲನ – ಪೃಥ್ವಿರಾಜ್ (ಚಿತ್ರ – ಡಿ.ಎಂ.ಟಿ)
ಅತ್ಯುತ್ತಮ ನಟನೆ – ಬಿ.ಎಸ್ ಸಿದ್ಧಾರ್ಥ (ಚಿತ್ರ – ಅಗ್ನಿಕುಂಜೋಂಡ್ರು ಕಂಡೆನ್)

ಛಾಯಾಚಿತ್ರ ಸ್ಪರ್ಧೆಯ ವಿಜೇತರು: (ಅಮೃತ ಪ್ರಶಸ್ತಿಗಳು)
ಪ್ರಥಮ – ಶಶಾಂಕ್ ಎಂ
ದ್ವಿತೀಯ – ಅಖಿಲೇಶ್ ಎಸ್
ತೃತೀಯ – ಇಮ್ರಾನ್ ಎಂ.ಕೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು