ಮುಂಬಯಿ: ಬಾಲಿವುಡ್ ನಟ ಅಜಯ್ ದೇವಗನ್ ತಂದೆ, ಸಾಹಸ ನಿರ್ದೇಶಕ ವೀರೂ ದೇವಗನ್ ಅವರು ಸೋಮವಾರ ನಿಧನರಾದರು.
77ರ ಹರೆಯದ ವೀರೂ ದೇವಗನ್ ಅವರು ಬಾಲಿವುಡ್ ನಲ್ಲಿ ಸುಮಾರು 80ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ತನ್ನ ಪುತ್ರ ಅಜಯ್ ದೇವಗನ್ ಮನೆಯಲ್ಲಿ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಬಾಲಿವುಡ್ ನ ಖ್ಯಾತನಾಮರಾದ ಶಾರೂಕ್ ಖಾನ್, ಸಂಜಯ್ ದತ್, ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಮೊದಲಾದವರು ಅಜಯ್ ದೇವಗನ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.