ಸ್ಯಾಂಡಲ್ ವುಡ್ನಲ್ಲಿ ಛಾಪು ಮೂಡಿಸುತ್ತಿರುವ ಕೊಡಗಿನ ಕೊಟ್ಟ್ ಕತ್ತಿರ ಪ್ರಕಾಶ್ ನಿರ್ದೇಶಿಸಿ ನಟಿಸಿರುವ ಮಕ್ಕಳ ತೀರ್ಪು ಚಿತ್ರವು ತೆರೆಕಾಣಲು ಸಿದ್ದವಾಗುತ್ತಿದ್ದು, ಎಲ್ಲವೂ ಸರಿ ಹೋದರೆ ಶೀಘ್ರವೇ ಥಿಯೇಟರ್ ನಲ್ಲಿ ಕೂತು ಸಿನಿಮಾ ವೀಕ್ಷಿಸಲು ಅವಕಾಶ ದೊರೆಯಲಿದೆ.
ಕೊಡಗಿನ ಚೇರಂಬಾಣೆಯವರಾದ ಕೊಟ್ಟ್ ಕತ್ತಿರ ಪ್ರಕಾಶ್ ಬೆಂಗಳೂರಿನಲ್ಲಿ ಉದ್ಯಮಿ ಹಾಗೂ ಚಲನಚಿತ್ರರಂಗದಲ್ಲಿ ಹೆಸರುಗಳಿಸಿದ್ದು ಈಗಾಗಲೇ ಹಲವು ಚಿತ್ರಗಳನ್ನ್ಲು ನಿರ್ದೇಶಿಸಿ, ನಟಿಸಿದ್ದಾರೆ. ಈಗಿನ ಕಾಲಕ್ಕೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ಮನದಟ್ಟು ಮಾಡುವ ಉದ್ದೇಶದಿಂದ ಮಕ್ಕಳಿಗಾಗಿಯೇ ಚಿತ್ರವನ್ನು ಮಾಡಿದ್ದು ಅದುವೇ ಮಕ್ಕಳ ತೀರ್ಪು ಚಿತ್ರವಾಗಿದೆ.
ಬಾಲಾಜಿ ಚಿತ್ರಾಲಯಯ ಚಿತ್ರವನ್ನು ಅರ್ಪಿಸಿದ್ದು, ಎನ್.ಟಿ.ಜಯರಾಮ ರೆಡ್ಡಿ ಕಥೆ-ಸಂಭಾಷಣೆ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶೇಖರ್ ಛಾಯಾಗ್ರಹಣ, ಮುತ್ತುರಾಜ್.ಟಿ ಸಂಕಲನ, ಶಿವಸತ್ಯ ಸಂಗೀತ ನಿರ್ದೇಶನವಿದೆ. ಮಕ್ಕಳತೀರ್ಪು ಚಲನಚಿತ್ರದಲ್ಲಿ ಕೊಟ್ಟ್ಕತ್ತಿರ ಪ್ರಕಾಶ್ ನ್ಯಾಯಧೀಶರಾಗಿ ನಂತರ ಮಕ್ಕಳಿಗೆ ವಕೀಲರಾಗಿ ವಾದಿಸಿ ಗೆಲುವನ್ನು ಸಾಧಿಸುವ ಪಾತ್ರವನ್ನು ಮನೋಜ್ಞವಾಗಿ ಮಾಡಿದ್ದಾರೆ.
ಸುಮಾರು 25 ಲಕ್ಷಗಳ ವೆಚ್ಚ ತಗುಲಿರುವ ಈ ಚಲನಚಿತ್ರದಲ್ಲಿ ಕೊಡಗಿನ ತೇಲಪಂಡ ಪವನ್ ತಮ್ಮಯ್ಯ ಮಗಳು ಯಶಿತಮ್ಮಯ್ಯ, ಮಂಡಿರ ಪದ್ಮ, ನೆಲ್ಲಚಂಡ ರೇಖಾ ನಾಣಯ್ಯ ಹಾಗೂ ಡ್ರಾಮ ಜೂನಿಯರ್ ಬೇಬಿಅನ್ಸಿಕ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ.