News Kannada
Friday, December 02 2022

ಮನರಂಜನೆ

ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿಗೆ ಸಿದ್ಧವಾಗಿದೆ ಕಿರುಚಿತ್ರ

Photo Credit :

ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿಗೆ ಸಿದ್ಧವಾಗಿದೆ ಕಿರುಚಿತ್ರ

ಕಾಸರಗೋಡು: ಮದ್ಯ ಮತ್ತು ಮಾದಕ ಪದಾರ್ಥ ಬಳಕೆ ಪರಿಣಾಮ ಹಾದಿ ತಪ್ಪುತ್ತಿರುವ ಯುಜನತೆ ಮತ್ತು ಕುಟುಂಬಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಕನಲೆರಿಯುಂ ಬಾಲ್ಯಂ(ಬೆಂಕಿಯಲ್ಲಿ ಸುಡುವ ಬಾಲ್ಯ)” ಎಂಬ ಕಿರುಚಿತ್ರವೊಂದು ಸಿದ್ಧವಾಗಿದೆ.

ಕಿನಾನೂರು-ಕರಿಂದಳಂ ಗ್ರಾಪಂಚಾಯತ್ ವತಿಯಿಂದ ರಾಜ್ಯ ಅಬಕಾರಿ,ಆರೋಗ್ಯ, ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ಈ ಚಿತ್ರ ನಿರ್ಮಾಣ ನಡೆದಿದೆ. ವಿಜ್ಯೋರ್ ಫಿಲಂಸ್ ಲಾಂಛನದಡಿ ನಿರ್ಮಿಸಲಾಗುವ ಚಿತ್ರಕ್ಕೆ ಅಜಿ ಕುಟ್ಟಮತ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ “ವಿಷಕಾಟ್(ವಿಷಗಾಳಿ)” ಎಂಬ ಸಿನಿಮಾ ಈಗಾಗಲೇ ಜನಪ್ರಿಯವಾಗಿದೆ. ಅಬಕಾರಿ ಇಲಾಖೆ ಜಾರಿಗೊಳಿಸುವ “ವಿಮುಕ್ತಿ” ಯೋಜನೆಯ ಅಂಗವಾಗಿ ಈ ಕಿರುಚಿತ್ರ ಸಿದ್ಧಗೊಂಡಿದೆ.

ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಾಧಾರಣ ಗತಿಯಲ್ಲಿ ನಡೆಸುವ ಜಾಗೃತಿ ತರಗತಿ ಇತ್ಯಾದಿಗಳಿಗಿಂತ ಭಿನ್ನವಾಗಿ ಹೆಚ್ಚುವರಿ ಪರಿಣಾಮ ನೀಡಲಿದೆ ಎಂಬ ಕಾರಣಕ್ಕಾಗಿ ಕಿರುಚಿತ್ರ ನಿರ್ಮಿಸುವ ಯೋಜನೆ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಇಲಾಖೆಗಳ ಬೆಂಬಲವೂ ಲಭಿಸಿದಾಗ ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗಿತ್ತು ಎಂದು ಚಿತ್ರ ನಿರ್ದೇಶಕ ಅಜಿ ಕುಟ್ಟಮತ್ ತಿಳಿಸಿದರು.

ಕಾಸರಗೋಡು, ಪರಪ್ಪ,ನೀಲೇಶ್ವರಂ, ಶಿವಮೊಗ್ಗ, ವಳಪಟ್ಟಣಂ ಮೊದಲಾದ ಪ್ರದೇಶಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆದಿದ್ದು, 90ಕ್ಕೂ ಅಧಿಕ ಮಂದಿ ಅಭಿನಯಿಸಿದ್ದಾರೆ. ಒಂದೂವರೆ ಗಂಟೆ ಅವಧಿಯ ಈ ಕಿರುಚಿತ್ರ ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಗೊಳ್ಳಲಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಚಾಯೋತ್ ಶಾಲೆಯಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಚಿತ್ರಿಕರಣಕ್ಕೆ ಸ್ವಿಚ್ ಆನ್ ನಡೆಸಿ ಚಾಲನೆ ನೀಡಿದ್ದರು. ರಾಜ್ಯಾದ್ಯಂತ ಶಿಕ್ಷಣಾಲಯಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.

See also  ಲೆಟ್ಸ್ ಟ್ರಾವೆಲ್ ಫ್ರೀ: ಸಾಂಸ್ಕೃತಿಕ ರಾಯಭಾರಿಯಾಗಿ ಆಯನಾ ವಿ.ರಮಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು