ನವದೆಹಲಿ: ಚಿತ್ರ ನಿರ್ಮಾಪಕ, ವೀನಸ್ ರೆಕಾರ್ಡ್ಸ್ ಆ್ಯಂಡ್ ಟೇಪ್ಸ್, ಯುನೈಟೆಡ್ 7 ಮಾಲಕ ಚಂಪಕ್ ಜೈನ್ ಅವರು ಅಕ್ಟೋಬರ್ 31(ನಿನ್ನೆ) ಬ್ರೈನ್ ಹ್ಯಾಮರೇಜ್(ಮೆದುಳಿನಾಘಾತ)ನಿಂದ ಮೃತಪಟ್ಟಿದ್ದಾರೆ.
ಜೈನ್ ಅವರು ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದ `ಮೈ ಖಿಲಾಡಿ ತು ಅನಾಡಿ’ ಮತ್ತು ಶಾರೂಕ್ ಖಾನ್ ಹಾಗೂ ಐಶ್ವರ್ಯ ರೈ ನಟನೆಯ ಜೋಶ್ ಚಿತ್ರವನ್ನು ನಿರ್ಮಿಸಿದ್ದರು.
ಮುಂಬಯಿಯ ಸಂತಕ್ರೂಜ್ ನಲ್ಲಿ ಜೈನ್ ಅವರ ಅಂತ್ಯಕ್ರಿಯೆಯು ನಡೆದಿದೆ. ಬಾಲಿವುಡ್ ಸೆಲೆಬ್ರಿಟಿಗಳಾಗಿರುವ ಸೋನು ಸೂಡ್, ಸಂಜಯ್ ನಿರೂಪಮ್, ಮಿಕಾ ಸಿಂಗ್ ಗುರ್ ಪ್ರೀತ್ ಕೌರ್ ಛಡ್ಡಾ ಮೊದಲಾದವರು ಜೈನ್ ಸಾವಿಗೆ ಕಂಬನಿ ಮಿಡಿದಿದ್ದಾರೆ.