ನವದೆಹಲಿ: ಸೂಪರ್ ಸ್ಟಾರ್ ಕಮಲ್ ಹಾಸನ್ ಇಂದು 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಾಲನಟನಾಗಿ ತಮಿಳು ಚಿತ್ರರಂಗದ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಛೆಬಲ್ಯರ್ ಫ್ರೆಂಚ್ ಅವಾರ್ಡ್ ಲಭಿಸಿದೆ.
1954ನವೆಂಬರ್ 7ರಂದು ದಿ.ಶ್ರಿನಿವಾಸನ್ ಹಾಗೂ ರಾಜಲ್ಷ್ಮೀ ದಂಪತಿಯ ಮಗಬಾಗಿ ಕಮಲ್ ಹಾಸನ್ ಜನಿಸಿದರು. ನಟನಾಗಿ, ನೃತ್ಯಗಾರನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಗಾಯಕರಾಗಿ ಹಾಗೂ ರಾಜಕೀಯ ರಂಗದಲ್ಲೂ ಇವರು ಹೆಸರು ಮಾಡಿದ್ದಾರೆ.
ತಮಿಳು ಚಿತ್ರರಂಗ ಸೇರಿದಂತೆ ತೆಲುಗು, ಮಲಯಾಳ, ಕನ್ನಡ, ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.