ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ಚಿತ್ರದ ಆಡಿಯೊ ಬಿಡುಗಡೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ಮಾಡಿದರು.
ನಂತರ ಮಾತನಾಡಿದ ದರ್ಶನ್, ‘ಇಂತಹ ಚಿತ್ರದ ಪಾತ್ರ ನಿರ್ವಹಿಸಲು ಗಟ್ಟಿಯಾದ ಪ್ರತಿಭೆ ಇರಬೇಕು. ರಾಧಿಕಾ ಅವರು ಇಂದಿಗೂ ಚಿತ್ರರಂಗದಲ್ಲಿಯೇ ಇದ್ದಾರೆ ಎಂದರೆ ಅವರ ಪ್ರತಿಭೆಯೇ ಸಾಕ್ಷಿ.ಚಿತ್ರದ ಟೀಸರ್ ಅದ್ಭುತವಾಗಿ ಮೂಡಿಬಂದಿದೆ ಎಂದರು.
ದಮಯಂತಿ ಚಿತ್ರವನ್ನು ನವರಸನ್ ಅವರು ನಿರ್ದೇಶನ ಮಾಡಿದ್ದು, ಚಿತ್ರದ ಟೀಸರ್ ಜನರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.