ರಚಿತಾ ರಾಮ್ ಅವರು ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರೊಂದಿಗೆ ಸಿನಿಮಾವೊಂದರಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಸುಳಿದಾಡುತ್ತಿದೆ.
ಕಲ್ಯಾಣ್ ದೇವ್ ವಿಜೇತ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಆದರೆ ಇದು ಸಿನಿ ಪ್ರಿಯರ ಮನಮುಟ್ಟಲು ವಿಫಲವಾಯಿತು. ಈಗ ಎರಡನೇ ಚಿತ್ರ `ಸೂಪರ್ ಮಚ್ಚಿ’ಗೆ ಚಿತ್ರೀಕರಣ ಆರಂಭವಾಗಿದೆ. ಇದರಲ್ಲಿ ರಚಿತಾ ರಾಮ್ ಅವರು ನಾಯಕಿಯಾಗಿ ನಟಿಸಲಿರುವರು. ಚಿತ್ರವನ್ನು ಪುಲಿ ವಾಸು ಅವರು ನಿರ್ದೇಶಿಸುತ್ತಿದ್ದಾರೆ.