ಕಾಸರಗೋಡು: ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ಕಾಸರಗೋಡಿನ ಕೃಷಿಕರ ಬವಣೆಯ ಸಾಕ್ಷ್ಯ ಚಿತ್ರ ಗಮನ ಸೆಳೆಯುತ್ತಿದೆ. ಕೃಷಿಕರು ಅನುಭವಿಸುತ್ತಿರುವ ಸಂಕಷ್ಟ ಮಯ ಬದುಕನ್ನು ಈ ಸಾಕ್ಷ್ಯ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.
ವಿಶ್ವಕರ್ಮ ಕ್ರಿಯೇಷನ್ ಬ್ಯಾನರ್ ನಲ್ಲಿ ದೇಲಂಪಾಡಿಯ ಆದೂರಿನಲ್ಲಿ ‘ಆನೆ ‘ ಎಂಬ ಹೆಸರಿನ ಈ ಸಾಕ್ಷ್ಯ ಚಿತ್ರ ಚಿತ್ರೀಕರಿಸಲಾಗಿದೆ. ಪತ್ರಕರ್ತ ಅದೂರು ಪುರುಷೋತ್ತಮ ಚಿತ್ರದ ನಿರ್ದೇಶಕರಾಗಿದ್ದಾರೆ.
ಅರಣ್ಯ ವಲಯದಲ್ಲಿ ವಾಸವಾಗಿರುವ ಕೃಷಿ ಕುಟುಂಬ ನಿರಂತದ ಆನೆಯ ಉಪಟಳಕ್ಕೆ ಸಿಲುಕಿ ನಲುಗುತ್ತಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಕಾಸರಗೋಡು ಪ್ರಾಥಮಿಕ ಸರಕಾರಿ ಹಿರಿಯ ಶಾಲೆ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ ಬಾಲಕೃಷ್ಣ ಅಡೂರು ಈ ಚಿತ್ರದಲ್ಲಿ ವಾಸು ಎಂಬ ಹೆಸರಲ್ಲಿ ನಟಿಸುತ್ತಿದ್ದಾರೆ.
ಒಂದೇ ಕುಟುಂಬದ ತಂದೆ, ತಾಯಿ, ಚಿಕ್ಕಪ್ಪ,ಅಜ್ಜ, ಮೊಮ್ಮಗ ಈ ಚಿತ್ರದಲ್ಲಿ ನಟಿಸಿದ್ದು, ಆಬಿದ್ ಕಾಞಂಗಾಡ್ ಛಾಯಾಗ್ರಹಣ ನಡೆಸಿದ್ದಾರೆ.
ಆದೂರು ಪರಿಸರದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿಕರು, ಜನತೆ ಭಯದ ವಾತಾವರಣದಲ್ಲಿದ್ದು, ಈ ಘಟನೆಯನ್ನು ಆಧರಿಸಿ ಮಲಯಾಳ ಭಾಷೆಯಲ್ಲಿ ಈ ಸಾಕ್ಷ್ಯಚಿತ್ರ ಚಿತ್ರೀಕರಿಸಲಾಗಿದೆ.