ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಹಲವಾರು ಮಾತುಗಳು ಕೇಳಿಬರುತ್ತಿತ್ತು. ಆದರೆ ಇಂದು ಅದು ನಿಜವಾಗಿದೆ. ಹಾಗೂ ಇದು ಸ್ಯಾಂಡಲ್ ವುಡ್ ನ ಹಿರಿಮೆ ಹೆಚ್ಚಿಸಿದೆ.
ಹೌದು, ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾರಥ್ಯದಲ್ಲಿ ಮೂಡಿಬರಲಿರುವ ಹೊಸ ಚಿತ್ರದ ಹೆಸರು ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತೆಲುಗು ಖ್ಯಾತ ನಟ ಪ್ರಭಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಾತ್ರಿಯಾಗಿದೆ.
“ಸಿನಿಮಾದ ಹೆಸರು “ಸಲಾರ್” ಎಂದಾಗಿದ್ದು, ಈ ಸಿನಿಮಾದಲ್ಲಿ ತನ್ನ ಪಾತ್ರ ವಿಭಿನ್ನ ಹಾಗೂ ತೀವ್ರವಾಗಿದೆ. ಚಿತ್ರದಲ್ಲಿ ಭಾಗಿಯಾಗಲು ನಾನು ಅತಿ ಉತ್ಸುಕನಾಗಿದ್ದೇನೆ” ಎಂದು ನಟ ಪ್ರಭಾಸ್ ಹೇಳಿಕೊಂಡಿದ್ದಾರೆ.