ಚೆನ್ನೈ: ಪಾಂಡಿಯನ್ ಸ್ಟೋರ್ಸ್ ಖ್ಯಾತಿಯ ಮುಲ್ಲೈ ಅಲಿಯಾಸ್ ಚಿತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಸೆಂಬರ್ 9ರ ಬೆಳಗ್ಗೆ ಈ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ.
ನನ್ನೇ ತಮ್ಮ ತಮಿಳು ಸೀರಿಯಲ್ ಚಿತ್ರೀಕರಣ ಮುಗಿಸಿಕೊಂಡು 2.30ರ ಸಮಯದಲ್ಲಿ ಹೋಟೆಲ್ ರೂಮಿಗೆ ಹಿಂದಿರುಗಿದ್ದ ಚಿತ್ರ, ಬೆಳಗಿನ ಜಾವ ತಮ್ಮ ಪ್ರಾಣವನ್ನು ಬಿಟ್ಟಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ವಿವರಗಳಿಗಾಗಿ ಆಕೆ ಶವನನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ವೈದ್ಯಕೀಯ ಕಾಲೇಜಿಗೆ ಕಳಿಸಲಾಗಿದ್ದು, ಅದರ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಟಿಯ ಸಾವಿನ ವಿಷಯ ತಿಳಿದ ಆಕೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ನಜ್ರತ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಾವಿನ ಕುರಿತಾದ ತನಿಖೆಯನ್ನು ಪ್ರಾರಂಭಿಸುವುದಾಗಿ ಮಾಹಿತಿ ನೀಡಿದ್ದಾರೆ.