ಬೆಂಗಳೂರು: ನಟಿ ಸಂಜನಾ ಗಲ್ರಾನಿಗೆ ಬರೋಬ್ಬರಿ 85 ದಿನಗಳ ನಂತರ ಜೈಲಿನ ವಾಸದಿಂದ ಬಿಡುಗಡೆಯಾಗುವ ಅವಕಾಶ ದೊರಕಿದೆ. ಡ್ರಗ್ಸ್ ಕೇಸಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ನಟಿ ಸಂಜನಾಗೆ ಹೈಕೋರ್ಟ್ ಡಿಸೆಂಬರ್ 11ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಜಮೀನಿನ ಅರ್ಜಿಯು ಹೈಕೋರ್ಟ್ನಲ್ಲಿ ವಿಚಾರಣೆ ಗೊಂಡಿದ್ದು, ವೈದ್ಯಕೀಯ ತಪಾಸಣೆಯ ನಂತರ ಸಲ್ಲಿಸಿದ್ದ ವರದಿಯನ್ನು ಆಧಾರವಾಗಿಸಿಕೊಂಡು ಜಮೀನನ್ನು ನೀಡಲಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ್ ಹರೀಶ್ ಕುಮಾರ್ ಪೀಠ ಹೇಳಿದರು.
ಈ ಷರತ್ತುಬದ್ಧ ಜಾಮೀನಿಗೆ ಇಬ್ಬರ ಶೂರಿಟಿ ಯೊಂದಿಗೆ, ಮೂರು ಲಕ್ಷ ರೂ ವೈಯಕ್ತಿಕ ಬಾಂಡ್ ಒದಗಿಸಬೇಕಾಗಿದೆ. ಅದರೊಂದಿಗೆ ಪ್ರತಿ ತಿಂಗಳು ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಕೋರ್ಟ್ ಆದೇಶಿಸಿದೆ.