ಮುಂಬೈ: ನೃತ್ಯ ಸಂಯೋಜಕ-ನಿರ್ದೇಶಕ ರೆಮೋ ಡಿಸೋಜ ಅವರು ಹೃದಯಾಘಾತದಿಂದ ಬಳಲುತ್ತಿದ್ದು, ಪ್ರಸ್ತುತ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ.
“ಇದು ಒಂದು ಆಘಾತಕಾರಿ ವಿಷಯ. ವೈದ್ಯರು ಡಿಸೋಜ ಅವರಿಗೆ ಆಂಜಿಯೋಗ್ರಫಿ ಮಾಡಿದ್ದಾರೆ. ಅವರು ಐಸಿಯುನಲ್ಲಿದ್ದಾರೆ. ದಯವಿಟ್ಟು ಪ್ರಾರ್ಥಿಸಿ. ಮುಂದಿನ 24 ಗಂಟೆಗಳು ಬಹಳ ಮುಖ್ಯ” ಎಂದು ರೆಮೋ ಅವರ ಪತ್ನಿ ಲಿಜೆಲ್ ಡಿಸೋಜಾ ಹೇಳಿದರು.
46 ವರ್ಷದ ರೆಮೋ ಡಿಸೋಜಾ, ಹಲವಾರು ಹಿಟ್ ಟ್ರ್ಯಾಕ್ಗಳನ್ನು ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ, ಸ್ಟ್ರೀಟ್ ಡ್ಯಾನ್ಸರ್ 3 ಡಿ, ಎಬಿಸಿಡಿ, ಎಬಿಸಿಡಿ 2 ಮತ್ತು ಎ ಫ್ಲೈಯಿಂಗ್ ಜಾಟ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಗರಿಮೆ ಅವರಿಗೆ ಸಲ್ಲುತ್ತದೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ಪ್ಲಸ್ ಇತರೆ ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ರೆಮೋ ಡಿಸೋಜಾ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ