ಮುಂಬೈ: ದೊಡ್ಡ ಪಾರ್ಶ್ವವಾಯುವಿನಿಂದ ನಟಿ ಶಿಖಾ ಮಲ್ಹೋತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿಯ ದೇಹದ ಬಲಭಾಗದ ಮೇಲೆ ಪರಿಣಾಮ ಬೀರಿದ್ದು, ಅವರನ್ನು ಜುಹು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಕೋವಿಡ್ -19 ರಿಂದ ನಟಿ ಚೇತರಿಸಿಕೊಂಡಿದ್ದು ಇದೀಗ ಪಾರ್ಶ್ವ ವಾಯುವಿಗೆ ತುತ್ತಾಗಿದ್ದಾರೆ.
ಅವರ ಆರೋಗ್ಯದ ಬಗ್ಗೆ ಮಾಹಿತಿ ಶಿಖಾ ಅವರ ಪಿ.ಆರ್ ಮ್ಯಾನೇಜರ್, ಅಶ್ವನಿ ಶುಕ್ಲಾ ಅವರಿಗೆ ದೊಡ್ಡ ಪಾರ್ಶ್ವವಾಯು ಬಂದಿದ್ದು ಅವರ ದೇಹದ ಬಲಭಾಗದ ಮೇಲೆ ಪರಿಣಾಮ ಬೀರಿದೆ. ಅವರನ್ನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಸೆಂಬರ್ 10 ರಂದು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಶಿಖಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಈಗ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಕೆಯ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ.
ನರ್ಸಿಂಗ್ ಪದವಿ ಹೊಂದಿರುವ ಶಿಖಾ, ಲಾಕ್ಡೌನ್ ನಲ್ಲಿ ಆರು ತಿಂಗಳ ಕಾಲ ಸ್ವಯಂ ಪ್ರೇರಣೆಯಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಈ ವರ್ಷದ ಅಕ್ಟೋಬರ್ನಲ್ಲಿ ಸ್ವತಃ ವೈರಸ್ಗೆ ತುತ್ತಾಗಿದ್ದರು.
ಶಾರೂಕ್ ಖಾನ್ ನಟಿಸಿದ್ದ ಫ್ಯಾನ್ ಸಿನಿಮಾದಲ್ಲಿ ಇವರು ನಟಿಸಿದ್ದರು.