ಮುಂಬಯಿ: ಕೊರಿಯೋಗ್ರಾಫರ್- ನಿರ್ದೇಶಕ ರೆಮೋ ಡಿಸೋಜ ಹೃದಯಾಘಾತದಿಂದ ಬಳಲುತ್ತಿದ್ದು, ಶೀಘ್ರವೇ ಚೇತರಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಟ್ವಿಟರ್ನಲ್ಲಿ ಹಾರೈಸಿದರು.
ರೆಮೋ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ಸಂಜೆ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ಥ್ರೋಬ್ಯಾಕ್ ವಿಡಿಯೋ ಕ್ಲಿಪ್ ಅನ್ನು ರಿಟ್ವೀಟ್ ಮಾಡುವ ಅಮಿತಾಬ್ ಬಚ್ಚನ್ “ಗೇಟ್ ವೆಲ್ ರೆಮೋ … ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.” ಎಂದು ಬರೆದುಕೊಂಡಿದ್ದಾರೆ.
ರೆಮೋ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ವೈದ್ಯರು ಅವರ ಆಂಜಿಯೋಗ್ರಫಿ ಮಾಡಿದರು. ಹತ್ತಿರದ ಮೂಲಗಳ ಪ್ರಕಾರ ರೆಮೋ ಡಿಸೋಜಾ ಅವರಿಗೆ ಹೃದಯಾಘಾತವಾಗಿತ್ತು ಆದರೆ ಸದ್ಯಕ್ಕೆ ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ ಹಾಗೂ ರೆಮೋ ಅವರು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ. ರೆಮೊ ಈಗ ಸುಧಾರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರೆಮೋ ಡಿಸೋಜಾ ಈಗ ಪ್ರಸಿದ್ಧ ನೃತ್ಯ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದು, ಕಿಕ್, ಝೀರೋ, ಬಾಜಿರಾವ್ ಮಸ್ತಾನಿ, ಭಜರಂಗಿ ಬಾಯಿಜಾನ್ ಮತ್ತು ಯೆ ಜವಾನಿ ಹೈ ದಿವಾನಿ ಮುಂತಾದ ಚಿತ್ರಗಳಿಗೆ ಹಿಟ್ ನೃತ್ಯ ಸಂಯೋಜನೆ ಮಾಡಿ ಪ್ರಸಿದ್ಧಿ ಪಡೆದಿದ್ದರು. ಇದಲ್ಲದೆ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ಪ್ಲಸ್ ಮುಂತಾದ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ರೆಮೋ ಡಿಸೋಜಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.