News Kannada
Sunday, January 29 2023

ಮನರಂಜನೆ

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಸೈಫ್ ಅಲಿ ಖಾನ್ ವಿರುದ್ಧ ಎಫ್ ಐ ಆರ್

Photo Credit :

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಸೈಫ್ ಅಲಿ ಖಾನ್ ವಿರುದ್ಧ ಎಫ್ ಐ ಆರ್

ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ಆದಿಪುರುಷ್ ಸಿನಿಮಾಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ದೂರು ದಾಖಲಾಗಿದೆ.

ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಸೈಫ್ ರಾವಣನನ್ನು ‘ಮಾನವೀಯ ಗುಣವುಳ್ಳವನು’ ಎಂದು ಕರೆದಿದ್ದರು. ಈ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ಇದೀಗ ಇದಕ್ಕೆ ಹಲವರು ತಮ್ಮ ಅಕ್ಷೇಪವನ್ನ ವ್ಯಕ್ತಪಡಿಸಿದ್ದು ತಕ್ಷಣ ಎಚ್ಚೆತ್ತುಕೊಂಡ ಸೈಫ್‌ ಕ್ಷಮೆ ಯಾಚಿಸಿದರು.

ಓಂ ರಾವತ್‌ ನಿರ್ದೇಶನದ ಆದಿಪುರುಷ್‌ನಲ್ಲಿ ಸೈಫ್ ಲಂಕೇಶ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಸೈಫ್ ಹೇಳಿಕೆಯ ವಿರುದ್ಧ ಈಗ ಉತ್ತರ ಪ್ರದೇಶದ ಜೌನ್‌ಪುರದ ವಕೀಲರೊಬ್ಬರು ದೂರ ದಾಖಲಿಸಿದ್ದು ಸೈಫ್ ಗೆ ಸಂಕಷ್ಟ ತಂದೊಡ್ಡಿದೆ.

ರಾಮಾಯಣವನ್ನು ಆಧರಿಸಿದ ಈ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಮಿಂಚಿದ್ದಾರೆ. ಡಿಸೆಂಬರ್ 6 ರಂದು ಸೈಫ್ ತಮ್ಮ ಸಂದರ್ಶನದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.

ರಾವಣನನ್ನು ಹೊಗಳಿದ ಸೈಫ್‌ ರಾವಣ ತನ್ನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಎಂಬ ಕೋಪಕ್ಕೆ ಸೀತೆಯನ್ನು ಅಪಹರಿಸಿದ ಎಂದು ರಾವಣನ ಪರವಾಗಿ ಮಾತನಾಡಿದ್ದಾರೆ ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಕರಣವು ಎಸಿಜೆಎಂ ನ್ಯಾಯಾಲಯದಲ್ಲಿದ್ದು ಡಿಸೆಂಬರ್ 23 ರಂದು ವಿಚಾರಣೆ ಕಾಯ್ದಿರಿಸಿದ್ದು, ಸೈಫ್ ಸೇಫ್ ಆಗಲಿದ್ದಾರ ಎಂದು ಕಾದು ನೋಡಬೇಕು.

See also  ಕುಟುಕು ಕಾರ್ಯಾಚರಣೆ: ಟ್ವೀಟ್ ಗೆ ಹಣ ಪಡೆಯುತ್ತಿದ್ದ ನಟನಟಿಯರ ಬಣ್ಣ ಬಯಲು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು