ಎಲ್ಲರೂ ಕಾತರದಿಂದ ಕಾಯುತ್ತಿರುವ ಕೆಜಿಎಫ್ ಚಾಪ್ಟರ್ 2ರ ಸ್ಪೆಷಲ್ ಅಪ್ಡೇಟ್ ಅನ್ನು ಡಿಸೆಂಬರ್ 21ರಂದು ನೀಡಲಿದೆಯಂತೆ. 2018 ರ ಡಿ. 21ರಂದು “ಕೆಜಿಎಫ್’ ಮೊದಲ ಭಾಗ ತೆರೆಗೆ ಬಂದಿತ್ತು. ಅದೇ ಹಿನ್ನೆಲೆಯಲ್ಲಿ “ಕೆಜಿಎಫ್ ಚಿತ್ರತಂಡ, “ಕೆಜಿಎಫ್-2′ ಚಿತ್ರದಕುರಿತಂತೆ ಪ್ರಮುಖ ವಿಚಾರವೊಂದನ್ನು ಪ್ರೇಕ್ಷಕರ ಎದುರು ಇರಿಸಲು ಇದೆಯಂತೆ.
ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರಶಾಂತ್, “ಅಭಿಮಾನಿಗಳು ಈ ವರ್ಷ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ, ಅವರಿಗಾಗಿ ಡಿ. 21
ರಂದು 10 ಗಂಟೆಗೆ ನಮ್ಮ ತಂಡದ ಎಲ್ಲಾ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಪ್ರಮುಖ ಅಪ್ಡೇಟ್ ಒಂದು ಅಭಿಮಾನಿಗಳಿಗೆ ಸಿಗಲಿದೆ’ ಎಂದಿದ್ದಾರೆ.
ಇದೀಗ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು ಚಿತ್ರತಂಡ ನೀಡಲಿರುವ ಸ್ಪೆಷಲ್ ಅಪ್ಡೇಟ್ ಬಗ್ಗೆ ಎಲ್ಲೆಡೆಯೂ ಚರ್ಚೆ ನಡೆಯುತ್ತದೆ. ಒಟ್ಟಾರೆಯಾಗಿ ಈ ಕುತೂಹಲಕ್ಕೆ ನಾಳೆ 10 ಗಂಟೆಗೆ ತೆರೆಬೀಳಲಿದೆ.