ಮಂಡ್ಯ: ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್, ಮಂಡ್ಯರವರ ನಿರ್ಮಾಣದ ಕಸಾಪ ಮಾಯಣ್ಣ ಅರ್ಪಿಸುವ ಎಸ್.ಕೃಷ್ಣಸ್ವರ್ಣಸಂದ್ರ ಕೃತಿ ಆಧಾರಿತ ನೇಗಿಲ ಧರ್ಮ ಚಿತ್ರದ ಚಿತ್ರೀಕರಣ ಡಿಸೆಂಬರ್ 24ರ ಬೆಳಿಗ್ಗೆ 10.30ಕ್ಕೆ ಗುತ್ತಲಿನ ಶ್ರೀ ಅರ್ಕೇಶ್ವರ ದೇಗುಲದಲ್ಲಿ ಆರಂಭಗೊಳ್ಳಲಿದೆ.
ಸಿನಿಮಾಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಲಿದ್ದು, ಶಾಸಕ ಎಂ.ಶ್ರೀನಿವಾಸ್ ಕ್ಯಾಮೆರಾಗೆ ಚಾಲನೆ ನೀಡಲಿದ್ದಾರೆ. ಸಿನಿಮಾಗೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕಸಾಪ ಮಾಯಣ್ಣ ಶುಭ ಹಾರೈಸಲಿದ್ದು, ವಾರ್ತಾಧಿಕಾರಿ ಟಿ.ಕೆ.ಹರೀಶ್ ಕ್ಲಾಪ್ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷ ನವೀನ್ ಚಿಕ್ಕಮಂಡ್ಯ, ನಗರಸಭೆ ಮಾಜಿ ಸದಸ್ಯ ಅನಿಲ್ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಉದ್ಯಮಿ ಮಂಜುನಾಥ್, ಮುಖಂಡರಾದ ನಟರಾಜು, ಶ್ರೀನಿವಾಸ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.
ಸಿನಿಮಾದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ, ನಿರ್ಮಾಣವನ್ನು ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ ಮಾಡುತ್ತಿದ್ದು, ಚಿತ್ರಕ್ಕೆ ಗೊರವಾಲೆ ಮಹೇಶ್, ಸಹ ನಿರ್ದೇಶನ ಮಾಡುತ್ತಿದ್ದು, ಸಹಾಯಕ ನಿರ್ದೇಶನ ರವಿ ಸೂರ್ಯ ಮಾಡುತ್ತಿದ್ದು, ಛಾಯಾಗ್ರಾಹಣ ನರಸಿಂಹ, ಸಂಕಲನ ಸಂಜೀವ್ ರೆಡ್ಡಿ ಮಾಡುತ್ತಿದ್ದು, ಚಿತ್ರದ ನಾಯಕ ನಟನಾಗಿ ಮದನ್ಗೌಡ, ನೈರುತ್ಯ, ನಾಯಕನಟಿಯಾಗಿ ಶಿಲ್ಪಾ ಚೆಲ್ಮಂಡಿ, ಕಾವ್ಯ ಹಾಗೂ ಪೋಷಕನಟರಾಗಿ ಶಂಕನಾದ ಆಂಜನಪ್ಪ, ತಗಹಳ್ಳಿ ವೆಂಕಟೇಶ್, ಮಂಡ್ಯ ಸತ್ಯ, ಪುಂಗ, ಲಂಕೇಶ್, ವರಲಕ್ಷ್ಮಿ ಇತರರು ನಟಿಸುತ್ತಿದ್ದಾರೆ.