ಮುಂಬೈ: ರಣಬೀರ್ ಕಪೂರ್ ಮತ್ತು ಅಲಿಯ ಭಟ್ ಈ ಹಿಂದೆ ಎಲ್ಲೆಡೆ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟಪಡಿಸಿದ್ದು, ಒಬ್ಬರನ್ನೊಬ್ಬರು ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಆ ಸಂದರ್ಭಗಳಲ್ಲಿ ಮದುವೆ ಯಾವಾಗ ಎಂಬ ಪ್ರಶ್ನೆ ತಲೆದೂಗಿದರು ಉತ್ತರಿಸುತ್ತಿರಲಿಲ್ಲ. ಇದೀಗ ಎಲ್ಲಾ ಊಹಾಪೋಹಗಳಿಗೂ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಈ ಜೋಡಿ.
ರನ್ಬಿರ್ ಕಪೂರ್ ಶ್ರೀಘ್ರದಲ್ಲೇ ಅಲಿಯಾಬೆಟ್ ಅವರನ್ನು ಮದುವೆಯಾಗು ವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕೊರೋನಾ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಮದುವೆಯಾಗುತ್ತಿತ್ತು ಎಂದು ರಣಬೀರ್ ಕಪೂರ್ ಮದುವೆಯ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ರಾಜೀವ್ ಮಸಂದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ, ಗೆಳತಿಯ ಬಗ್ಗೆ ಮಾತನಾಡಿದ ರನ್ಬಿರ್ ಆಕೆ ಒಬ್ಬ ಸಾಧಕಿ, ಲಾಕ್ ಡೌನ್ ಸಮಯದಲ್ಲಿ ಗಿಟಾರ್ ನುಡಿಸುವುದನ್ನು, ಚಿತ್ರಕಥೆ ಬರೆಯುವುದನ್ನು ಕಲಿತಿದ್ದಾರೆ. ಅವರೆದುರು ಚಿಕ್ಕವನಂತೆ ಕಾಣುತ್ತೇವೆ ಎಂದರು.
ಬ್ರಹ್ಮಾಸ್ತ್ರ ಚಿತ್ರದಲ್ಲಿ ಈ ಜೋಡಿ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ.