ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕ ಡಿ.28ರಂದು ಸರಳ ಸಮಾರಂಭದಲ್ಲಿ ವಿವಾಹವಾಗಲಿರುವರು.
ನಿಹಾರಿಕ ಅವರು 3ರ ಹರೆಯದಲ್ಲಿ ಸಿನಿಮಾದಲ್ಲಿ ನಟಿಸಿದ್ದರು. ರಮೇಶ್ ಅರವಿಂದ್ ಅವರು ತನ್ನ ಮಗಳ ಮದುವೆಯ ತಯಾರಿಯಲ್ಲಿ ತೊಡಗಿದ್ದು, 2021ರ ಎರಡನೇ ವಾರದಲ್ಲಿ ದೊಡ್ಡ ಮಟ್ಟದಲ್ಲಿ ಔತಣಕೂಟವನ್ನು ಆಯೋಜಿಸಲು ಅವರು ನಿರ್ಧರಿಸಿರುವರು.
ಮದುವೆಗೆ ಆಹ್ವಾನಿತರ ಹೆಸರನ್ನು ಗೌಪ್ಯವಾಗಿಡಲಾಗಿದೆ. ಕೊರೋನಾ ನಿಯಮಗಳನ್ನು ಪಾಲಿಸಬೇಕಾಗಿರುವ ಕಾರಣ ಹಾಗೂ ಜನರು ಹೆಚ್ಚಿನ ಸಂಖ್ಯೆಯನ್ನು ಸೇರಬಾರದು ಎಂದು ಸರಳವಾಗಿ ಮದುವೆ ಆಯೋಜಿಸಲಾಗಿದೆ.