ಹೈದರಾಬಾದ್: ತೆಲುಗು ತಾರೆ ವರುಣ್ ತೇಜ್ ಅವರಿಗೆ COVID-19 ಪೋಸಿಟಿವ್ ಬಂದಿದ್ದು, ಈ ಬಗ್ಗೆ ನಟ ಮಂಗಳವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ. ಅವರ ಸೋದರಸಂಬಂಧಿ ರಾಮ್ ಚರಣ್ ವೈರಸ್ ಗೆ ತುತ್ತಾಗಿರುವ ಬಗ್ಗೆ ಇಂದು ಬೆಳಗ್ಗೆ ತಿಳಿದುಬಂದಿತ್ತು. ಇದೀಗ ವರುಣ್ ತೇಜ್ ಅವರಿಗೂ ಕೋರೋನ ಬಡವಾಗಿರುವುದು ತೆಲುಗು ಹಲವು ನಟರಲ್ಲಿ ಆತಂಕ ಹುಟ್ಟಿಸಲು ಕಾರಣವಾಗಿದೆ.
ಮಗಧೀರ ನಟ ಮತ್ತು ವರುಣ್ ತೇಜ್ ಕೆಲವು ದಿನಗಳ ಹಿಂದೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ನವವಿವಾಹಿತ ನಿಹಾರಿಕಾ ಕೊನಿಡೆಲಾ ಅವರ ಮನೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರ ಸೋದರಸಂಬಂಧಿಗಳಾದ ನಟರು ಅಲ್ಲು ಅರ್ಜುನ್, ಅಲ್ಲು ಸಿರಿಶ್ ಹಾಗೂ ಇನ್ನೂ ಹಲವರು ಕೂಡ ಸೇರಿದ್ದರು.