ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಿಂದ ಎಲ್ಲಾ ಪೋಸ್ಟ್ಗಳನ್ನು ಅಳಿಸಿದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅದರ ಮೂಲಕ 2020ರಲ್ಲಿ ಅನುಭವಿಸಿದ ಕಷ್ಟಗಳನ್ನು ಹಾಗೂ 2021ರ ಆಶಾಭಾವದ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿರುವ ಆಡಿಯೋದಲ್ಲಿ ದೀಪಿಕಾ,”2020 ಎಲ್ಲರಿಗೂ ಅನಿಶ್ಚಿತತೆಯ ವರ್ಷವಾಗಿತ್ತು, ಆದರೆ ಈ ವರ್ಷ ಬಹಳಷ್ಟು ಕಳಿಸಿದೆ. ಆದ್ದರಿಂದ ನಾನು ಈ ವರ್ಷಕ್ಕೆ ಕೃತಜ್ಞತೆ ತೋರುತ್ತೇನೆ. ಈ ಮಾತನ್ನು ಪ್ರತಿಯೊಬ್ಬರೂ ಒಪ್ಪುತ್ತೀರಿ ಎಂದು ಭಾವಿಸುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.