ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫೇಸ್ಬುಕ್ ಮುಖಾಂತರ ಜನವರಿ 10ರಂದು ಬೆಳಗ್ಗೆ 11ಗಂಟೆಗೆ ಲೈಫ್ ಬರಲಿದ್ದಾರೆ ಎಂದು ಡಿ ಕಂಪನಿ ಫೇಸ್ಬುಕ್ ನಲ್ಲಿ ತಿಳಿಸಿದ್ದು, ‘ನಮ್ಮೆಲ್ಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಲೈವ್ ಬರಲಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಾರೆ.
ಅಪರೂಪಕ್ಕೆ ದರ್ಶನ್ ಲೈವ್ ಬರುವ ಹಿನ್ನೆಲೆಯಲ್ಲಿ ಹಲವಾರು ಚರ್ಚೆಗಳು ನಡೆಯುತ್ತಿದ್ದು, ರಾಬರ್ಟ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೊರಹಾಕಬಹುದು ಎಂಬ ಕುತೂಹಲ ಎಲ್ಲರಲ್ಲಿ ಮಾಡುತ್ತಿದೆ.