ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಬುಧವಾರವಷ್ಟೇ ಸುದ್ದಿಗೋಷ್ಠಿ ಕರೆದು ಯುವರಾಜ್ ಸ್ವಾಮಿ ಹಾಗೂ ತನ್ನ ನಡುವೆ ಯಾವುದೇ ಸಂಬಂಧವಿಲ್ಲವೆಂದು ಬಹಿರಂಗವಾಗಿ ಹೇಳಿದ್ದರು. ಆದರೆ ಇದೀಗ ಇವರ ಸ್ವಾಮಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾಗೆ ಸಿಸಿಬಿ ನೋಟಿಸ್ ನೀಡಿದ.
ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿರುವ ಸಿಸಿಬಿ ನಟಿ ರಾಧಿಕಾ ಕುಮಾರಸ್ವಾಮಿಗೆ ವಾಟ್ಸಪ್ ಮತ್ತು ಟೆಕ್ಸ್ಟ್ ಮೆಸೇಜ್ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವರಾಜ್ ಜೊತೆ 1. 25 ಕೋಟಿ ವ್ಯವಹಾರ ಸಂಬಂಧಿತವಾಗಿ ಸಿಸಿಬಿ ಪೊಲೀಸರಿಗೆ ಸಿಕ್ಕ ಆಧಾರದ ಮೇಲೆ ಈ ವಿಚಾರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.