ನಾಳೆ ಜನರೆದುರು ಬರಬೇಕಾಗಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದೇ ರಿಲೀಸ್ ಆಗಿದ್ದು, ಹತ್ತು ನಿಮಿಷದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
ಜನವರಿ 8 ಯಶ್ ಹುಟ್ಟು ಹಬ್ಬದ ಪ್ರಯುಕ್ತ ದೇಶದ ಎಲ್ಲೆಡೆ ಸುದ್ದಿಮಾಡಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಮಾಡುವುದಾಗಿ ಕೆಜಿಎಫ್ ಚಿತ್ರತಂಡ ತಿಳಿಸಿತ್ತು. ಆದರೆ ತಿಳಿಸಿದ ಅವರಿಗೂ ಮುಂಚೆಯೇ ಬಿಡುಗಡೆ ಮಾಡಿದ್ದು ಇದೀಗ ಎಲ್ಲರಿಗೂ ಅಚ್ಚರಿ ತಂದಿದೆ. ಅಷ್ಟೇ ಅಲ್ಲದೆ ಬಿಡುಗಡೆಯಾದ ಕೇವಲ 10 ನಿಮಿಷಗಳ ಅವಧಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.
ಕೆಜಿಎಫ್ ಚಾಪ್ಟರ್ ಒಂದರ ಮುಂದುವರೆದ ಭಾಗ ಇದಾಗಿದ್ದು, ಇದರಲ್ಲಿ ಯಾವ ರೀತಿಯ ಕಥೆ ಹಾಗೂ ಚಿತ್ರೀಕರಣ ಬಂದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಉತ್ತರವೆಂಬಂತೆ ಈ ಟೀಸರ್ ರಿಲೀಸ್ ಆಗಿದ್ದು ನೋಡುಗರಲ್ಲಿ ಮತ್ತಷ್ಟು ಕುತೂಹಲವನ್ನು ಹಾಗೂ ಕಾತುರವನ್ನು ಹೆಚ್ಚಿಸಿದೆ.
ಟೀಸರ್ ನಲ್ಲಿ ಚಿತ್ರದ ನಾಯಕ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ಪತ್ರದಲ್ಲಿ ಕಳಿಸಿ ಕಂಡಿರುವ ಅರ್ಚನ ಜೋಯಿಸ್, ಹಾಗೂ ಅಧೀರ ಪತ್ರವನ್ನು ಮುಖ್ಯವಾಗಿ ತೋರಿಸಲಾಗಿದೆ. ಅದರೊಂದಿಗೆ ಒಂದೇ ಟೀಸರ್ ನಿಂದ ಆಯ್ತು ಭಾಷೆಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿರುವುದು ಚಿತ್ರತಂಡದ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.