ಬೆಂಗಳೂರು: ಓಟಿಟಿಯಲ್ಲಿ ‘ರಾಬರ್ಟ್’ ಸಿನಿಮಾ ರಿಲೀಸ್ ಆಗುವುದಿಲ್ಲ. ಮಹಾ ಶಿವರಾತ್ರಿ ಪ್ರಯುಕ್ತ ಮಾರ್ಚ್ 11 ರಂದು ‘ರಾಬರ್ಟ್’ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಒಂದು ವಾರ ಹೆಚ್ಚು ಕಡಿಮೆ ಆಗಬಹುದು ಎಂದು ಫೇಸ್ಬುಕ್ ಲೈವ್ ಬಂದಿದ್ದು ದರ್ಶನ್ ಹೇಳಿದ್ದಾರೆ.
ಅದರೊಂದಿಗೆ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ 2021 ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಅಷ್ಟೇ ಅಲ್ಲದೆ ಫೆಬ್ರವರಿ 16ರಂದು ಪ್ರತಿವರ್ಷ ಆಚರಿಸಲಾಗುತ್ತಿದ್ದ ಅವರ ಹುಟ್ಟುಹಬ್ಬವನ್ನು ಈ ಬಾರಿ ಆಚರಿಸಿಕೊಳ್ಳುವುದಿಲ್ಲ. ಆದ್ದರಿಂದ ಅಭಿಮಾನಿಗಳು ದಯವಿಟ್ಟು ತಮ್ಮ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಳ್ಳುವ ದಕ್ಕೆ ಕಾರಣ ನೀಡಿರುವ ದರ್ಶನ್, ಕೊರೋನ ದಿಂದಾಗಿ ಎಲ್ಲರೂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಗೂ ಹಲವು ರೀತಿಯ ಹಣಕಾಸಿನ ಸಮಸ್ಯೆಗಳು ಪ್ರತಿಯೊಬ್ಬರನ್ನು ಬಾಧಿಸುತ್ತದೆ. ಇದರಿಂದಾಗಿ ತನ್ನ ಹುಟ್ಟುಹಬ್ಬಕ್ಕಾಗಿ ಯಾರು ಹಣವನ್ನು ವೆಯ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ.